• Slide
    Slide
    Slide
    previous arrow
    next arrow
  • ಅಂದರ್ ಬಾಹರ್ ಆಡುತ್ತಿದ್ದ ಎಂಟು ಜನರ ಬಂಧನ: ನಗದು ಹಣ, ಮೊಬೈಲ್ ವಶಕ್ಕೆ

    300x250 AD

    ಶಿರಸಿ: ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರಸಿ ಹೊಸಮಾರುಕಟ್ಟೆ ಪೊಲೀಸರು ಎಂಟು ಜನರನ್ನು ಬಂಧಿಸಿ ನಗದು ಹಣವನ್ನು, ಮೊಬೈಲ್ ಗಳನ್ನು ವಶಪಡಿಸಿಕೊಂಡ ಘಟನೆ ನಗರದ ಕೆ.ಎಚ್.ಬಿ ಕಾಲೋನಿ ನಡೆದಿದೆ.

    ನಗರದ ಕೆ.ಎಚ್.ಬಿ ಕಾಲೋನಿ 4 ನೇ ಕ್ರಾಸ್‌ನಲ್ಲಿರುವ ಬುಡೇನ್ ಸಾಬ್ ಇವರ ಮನೆಯ ಒಳಗೆ ಅಂದರ್ ಬಾಹರ್ ಜುಗರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

    ಬುಡೇನ್ ಸಾಬ್ ಗರೀಬ್ ಸಾಬ್ ಗಾಣಗ , ಗೌಸ್ ಮೊಹಿದ್ದಿನ್ ಮಹಮ್ಮದ್ ಸ್ಮಾಯಿಲ್ ಕೆಂಚರಗಟ್ಟಿ , ಮಹಮ್ಮದ್ ಕಾಸಿಮ್ ನೂರಅಹಮ್ಮದ್ ತಿಮ್ಮಾಪುರ, ಶಾಬಾಜ್ ರೆಹಮುತ್ತಲ್ಲಾ ಶೇಖ್ , ಜಾಫರ ಅಬ್ದುಲ್ ಸತ್ತಾರ ಶೇಖ್ , ಜಾವೀದ ಇಸಾಕ ಶೇಖ್, ಮಾರುತಿ ರಾಮ ನಾಯ್ಕ , ಸಲ್ಮಾನ್ ಇನಾಯತ್ ಶೇಖ್ ಎಂಬುವವರನ್ನು ಬಂಧಿಸಲಾಗಿದೆ.

    300x250 AD

    ಬಂಧಿತ ಆರೋಪಿಗಳಿಂದ ಆರು ಮೊಬೈಲ್ ಗಳನ್ನು 10,200 ರೂ. ನಗದು ಹಣವನ್ನು ಹಾಗೂ ಅಂದರ್ ಬಾಹರ್ ಆಟಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top