Slide
Slide
Slide
previous arrow
next arrow

ಮುಜರಾಯಿ ಇಲಾಖೆಗೆ ಒಳಪಡುವ ದೇಗುಲಗಳಲ್ಲಿ ಮೊಬೈಲ್‌ ನಿಷೇಧ

300x250 AD

ಬೆಂಗಳೂರು: ಮುಜರಾಯಿ ಇಲಾಖೆಗೆ ಒಳಪಡುವ ರಾಜ್ಯಾದ್ಯಂತ 35,000 ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ, ಈ ನಿರ್ಬಂಧದ ಬಗ್ಗೆ ಭಕ್ತರಿಗೆ ತಿಳಿಸುವ ಫಲಕಗಳನ್ನು ಪ್ರದರ್ಶಿಸಲು ದೇವಾಲಯಗಳಿಗೆ ನಿರ್ದೇಶಿಸಲಾಗಿದೆ.

ಇತ್ತೀಚಿಗೆ ಮೊಬೈಲ್ ಬಳಕೆ ಹೆಚ್ಚಾಗಿದ್ದು, ದೇವಸ್ಥಾನದ ಸಿಬ್ಬಂದಿ ಹಾಗೂ ಇತರ ಭಕ್ತರಿಗೆ ತೊಂದರೆಯಾಗುತ್ತಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಆದ್ದರಿಂದ, ದೇವಸ್ಥಾನದ ಆವರಣದಲ್ಲಿರುವಾಗ ಜನರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಲು ಸೂಚಿಸಲಾಗಿದೆ.

ಮುಜರಾಯಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳು ಸಹಿ ಮಾಡಿರುವ ಆದೇಶದಲ್ಲಿ ಎಲ್ಲಾ ದೇವಾಲಯದ ಆಡಳಿತಾಧಿಕಾರಿಗಳು ದೇವಾಲಯದ ಆವರಣದಲ್ಲಿ ಸಂದೇಶವನ್ನು ಫಲಕಗಳಲ್ಲಿ ಪ್ರದರ್ಶಿಸಲು ವ್ಯವಸ್ಥೆ ಮಾಡಬೇಕಾಗಿದೆ. ಆದರೆ, ಈ ನಿಯಮದ ಅನುಷ್ಠಾನ ಮತ್ತು ಆದೇಶವನ್ನು ಪಾಲಿಸದವರ ವಿರುದ್ಧ ಕೈಗೊಳ್ಳಬಹುದಾದ ಸಂಭವನೀಯ ಕ್ರಮಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

300x250 AD

ಸದ್ಯ ಮುಜರಾಯಿ ಇಲಾಖೆಯು ಭಕ್ತಾಧಿಗಳು ಮೊಬೈಲ್‌ ಬಳಕೆ ಮಾಡಿ ನಿಯಮ ಉಲ್ಲಂಘಿಸಿದರೆ ಯಾವ ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ದೇವಸ್ಥಾನಗಳ ಆಡಳಿತ ಮಂಡಳಿಗಳು ಮೊಬೈಲ್‌ ಕಸಿದುಕೊಂಡು ಎಚ್ಚರಿಕೆ ನೀಡಿ ಮರಳಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

Share This
300x250 AD
300x250 AD
300x250 AD
Back to top