• Slide
    Slide
    Slide
    previous arrow
    next arrow
  • ಬಳಲೆ-ಮಾದನಗೇರಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ

    300x250 AD

    ಗೋಕರ್ಣ : ಐಆರ್‌ಬಿಯವರು ನಿರ್ಮಿಸಿದ ಚತುಷ್ಪಥ ರಸ್ತೆ ಕಾಮಗಾರಿಯ ಬಗ್ಗೆ ಸಾಕಷ್ಟು ಆರೋಪಗಳಿದ್ದು ಹಲವೆಡೆ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ. ರಸ್ತೆ ಕಾಮಗಾರಿಯ ಸಮಸ್ಯೆಗಳನ್ನು ಅರಿತುಕೊಳ್ಳಲು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಬಸ್ ಮೂಲಕ ಸಂಚಾರ ಮಾಡಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಅವಾಂತರಗಳ ಬಗ್ಗೆ ಸಾರ್ವಜನಿಕರು ಸಮಸ್ಯೆ ವಿವರಿಸಿದರು.

    ಬಳಲೆ-ಮಾದನಗೇರಿಯಲ್ಲಿ ಮೇಲ್ಸೇತುವೆ ನಿರ್ಮಿಸಿಕೊಡುವುದಾಗಿ ಐಆರ್‌ಬಿಯವರು ಭರವಸೆ ನೀಡಿದ್ದರು. ಇಲ್ಲಿ 4 ರಸ್ತೆಗಳು ಕೂಡಿರುವುದರಿಂದ ಅಪಾಯವಾಗುವ ಸಾಧ್ಯತೆ ದಟ್ಟವಾಗಿದೆ. ಗೋಕರ್ಣ ಮಾರ್ಗವಾಗಿ ಅಚವೆ ಮೂಲಕ ಯಾಣಕ್ಕೆ ತಲುಪಲು ಹಾಗೂ ಅಂಕೋಲಾ-ಕುಮಟಾ ರಸ್ತೆಯು ಇರುವುದರಿಂದ ಇಲ್ಲಿ ಮೇಲ್ಸೇತುವೆ ನಿರ್ಮಿಸಿದರೆ ಗೋಕರ್ಣ-ಯಾಣ ರಸ್ತೆ ಸಂಚಾರಕ್ಕೆ ಅನುಕೂಲವಾಗಲಿದೆ. ಆದರೆ ಕಂಪನಿಯವರು ಮಾತ್ರ ಇನ್ನುವರೆಗೂ ಇತ್ತ ಮುಖ ಹಾಕಿಲ್ಲ ಎಂದು ಇಲ್ಲಿಗೆ ಆಗಮಿಸಿದ ಅಧಿಕಾರಿಗಳಿಗೆ ಸ್ಥಳೀಯರು ವಿವರಿಸಿದರು.

    ಜಿ.ಪಂ. ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ದೇವರಾಯ ಜಿ. ನಾಯಕ, ಶ್ರವಣಕುಮಾರ ನಾಯ್ಕ, ಮಂಜುನಾಥ ನಾಯ್ಕ, ಜಟ್ಟಿ ಮಾಸ್ತರ ಸೇರಿದಂತೆ ಸ್ಥಳೀಯ ಹಲವರು ಈ ಮೇಲ್ಸೇತುವೆ ನಿರ್ಮಿಸಿಕೊಡುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಮೇಲ್ಸೇತುವೆ ನಿರ್ಮಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಘಾತ ಹೆಚ್ಚಾಗಲಿದೆ. ಈಗಲೇ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿವೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು.

    300x250 AD

    ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಈ ಕುರಿತು ಐಆರ್‌ಬಿ ಕಂಪನಿಯವರೊoದಿಗೆ ಮಾತನಾಡಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top