ಹೊನ್ನಾವರ: ಪಟ್ಟಣದ ರೋಟರಿ ಸಭಾಭವನದಲ್ಲಿ ನೂತನ ಪದಾಧಿಕಾರಿಗಳು ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟರಿ ಲೆನಿ ಡಿ. ಕೊಸ್ತಾ ಮಾತನಾಡಿ, ರೋಟರಿ ಕ್ಲಬ್ ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಇಲ್ಲಿ ಪ್ರತಿ ವರ್ಷ ನೂತನ ಪದಾಧಿಕಾರಿಗಳು ಆಯ್ಕೆ ಮಾಡಲಾಗುತ್ತದೆ. ಎಲ್ಲರಿಗೂ ನಾಯಕತ್ವ ದೊರಕುತ್ತದೆ. ಹೊಸ ಹೊಸ ಯೋಜನೆಗಳು ಕಾರ್ಯಗತವಾಗುತ್ತದೆ. ಹೊನ್ನಾವರ ರೋಟರಿ ಕ್ಲಬ್ 57 ವರ್ಷಗಳ ಯಶಸ್ವಿ ಸೇವೆಯೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡಿದೆ.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅಸಿಸ್ಟಂಟ್ ಗವರ್ನರ್ ಶೈಲೇಶ ಹಳದೀಪುರ ಮಾತನಾಡಿ, ಹೊನ್ನಾವರ ರೋಟರಿ ಕ್ಲಬ್ ನಲ್ಲಿ ಹಿರಿಯ ಮತ್ತು ಕಿರಿಯ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಸರ್ವ ಸದಸ್ಯರು ಅಭಿನಂದನೆ ಅರ್ಹರಾಗಿದ್ದಾರೆ ಎಂದರು.
ರೋಟರಿ ಕ್ಲಬ್ ನೂತನ ಅಧ್ಯಕ್ಷ ದೀಪಕ ಲೋಪಿಸ್, ಕಾರ್ಯದರ್ಶಿ ರಾಜೇಶ ನಾಯ್ಕ, ಖಜಾಂಚಿ ಎಸ್.ಎನ್.ಹೆಗಡೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಪದಗ್ರಹಣ ಅಧಿಕಾರಿಯಾಗಿ ಪಾಲ್ಗೊಂಡ ನಾರಾಯಣ ಯಾಜಿ ಮಾತನಾಡಿ, ರೋಟರಿ ಕ್ಲಬ್ ಜಗತ್ತಿನಾದ್ಯಂತ ಸೇವಾ ಚಟುವಟಿಕೆಯಲ್ಲಿ ತೊಡಗಿದ್ದು ಬದುಕಿನಲ್ಲಿ ಭರವಸೆಯನ್ನು ಕೊಡುತ್ತದೆ. ರೋಟರಿಯ ಮೂಲಕ ನೀಡಿದ ದಾನ ಸದುಪಯೋಗ ಆಗುತ್ತದೆ. ಇಂದು ಜವಾಬ್ದಾರಿ ಸ್ವೀಕರಿಸಿದ ನೂತನ ಪದಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಾರೆ ಎಂಬ ವಿಶ್ವಾವಿದೆ ಎಂದರು.
ನೂತನ ಅಧ್ಯಕ್ಷ ದೀಪಕ ಲೋಪಿಸ್ ಮಾತನಾಡಿ, ನನ್ನ ಸೇವಾ ಮನೋಭಾವನೆ ನೋಡಿ ನನ್ನನ್ನು ಗುರುತಿಸಿ ರೋಟರಿಯಲ್ಲಿ ಮಹತ್ವದ ಜವಾಬ್ದಾರಿ ವಹಿಸಲಾಗಿದೆ. ಇದು ಅತ್ಯಂತ ಸಂತಸ ತಂದಿದೆ. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
ರೋಟರಿ ಕ್ಲಬ್ ಗೆ ರಾಜೀವ ಶಾನಭಾಗ ಮತ್ತು ಹೇಮಾವತಿ ನಾಯ್ಕ ಸೇರ್ಪಡೆಗೊಂಡರು. ನಿಕಟಪೂರ್ವ ಅಧ್ಯಕ್ಷ ಮಹೇಶ ಕಲ್ಯಾಣಪುರ ಸ್ವಾಗತಿಸಿದರು. ಡಾ. ಗೌತಮ ಬಳಕೂರ, ಜಿ.ಪಿ.ಹೆಗಡೆ, ಸ್ಟಿಫನ್ ರೊಡ್ರಿಗಿಸ್ ಮತ್ತು ರಂಗನಾಥ ಪೂಜಾರಿ ಅತಿಥಿ ಪರಿಚಯಿಸಿದರು. ದಿನೇಶ ಕಾಮತ ಮತ್ತು ಅನುಷಾ ಫರ್ನಾಂಡೀಸ್ ನಿರ್ವಹಿಸಿದರು. ರಾಜೇಶ ನಾಯ್ಕ ವಂದಿಸಿದರು.