ಶಿರಸಿ: ನಗರದ ಯೋಗ ಮಂದಿರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಸಂಹಿತಾ ಮ್ಯೂಸಿಕ್ ಪೋರಮ್‌ನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾ ಗೌರವ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಜು.16,ರವಿವಾರ ಮಧ್ಯಾಹ್ನ 3.30ಕ್ಕೆ ಆಯೋಜಿಸಲಾಗಿದೆ.
ಸಂಹಿತಾ ಮ್ಯೂಸಿಕ್ ಫೋರಮ್‌ನ ಅಧ್ಯಕ್ಷ ಸುಬ್ರಾಯ ಹೆಗಡೆ ಕುಪ್ಪನಮನೆ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಕೆ.ಎಂ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಪಂ.ಎಂ.ಪಿ.ಹೆಗಡೆ ಪಡಿಗೆರೆ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಹೆಸರಾಂತ ತಬಲಾ ವಾದಕ ಪ್ರೊ.ಗೋಪಾಲಕೃಷ್ಣ ಹೆಗಡೆ ಕಲಭಾಗ ಅವರಿಗೆ ಕಲಾಗೌರವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ನಂತರ ಸಂಹಿತಾ ಮ್ಯೂಸಿಕ್ ಪೋರಮ್‌ನ ತಬಲಾ ಶಿಕ್ಷಕರಾದ ಅನಂತ ಹೆಗಡೆ ವಾಜಗಾರ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ತಬಲಾ ವಾದನ ನಡೆಯಲಿದೆ. ತದನಂತರ ಪಂಡಿತ ಎಂ.ಪಿ.ಹೆಗಡೆ ಪಡಿಗೆರೆ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು ತಬಲಾದಲ್ಲಿ ಪ್ರೊ. ಗೋಪಾಲಕೃಷ್ಣ ಹೆಗಡೆ ಕಲಬಾಗ, ಹಾರ್ಮೊನೀಯಂನಲ್ಲಿ ವಿ.ಗೌರೀಶ ಯಾಜಿ ಕೂಜಳ್ಳಿ ಸಾಥ್ ನೀಡುವರು ಎಂದು ಸಂಹಿತಾ ಮ್ಯೂಸಿಕ್ ಪೋರಮ್ ಪ್ರಕಟಣೆ ತಿಳಿಸಿದೆ.