ಶಿರಸಿ: ನರೆಬೈಲ್’ನ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂತ್ರಿಮಂಡಲ ರಚನೆ ಮತ್ತು ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮವು ಜು.12, ಬುಧವಾರದಂದು ನಡೆಯಿತು.
ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಲಾಯಿತು. ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಆಡಳಿತಾಧಿಕಾರಿ ವಿದ್ಯಾ ನಾಯ್ಕ ಪ್ರತಿಜ್ಞಾವಿಧಿ ಬೋಧಿಸಿ ವಿದ್ಯಾರ್ಥಿ ಪ್ರತಿನಿಧಿಗಳ ಕರ್ತವ್ಯಗಳನ್ನು ವಿವರಿಸಿದರು.
ಕಾರ್ಯದರ್ಶಿ ಎಲ್.ಎಂ.ಹೆಗಡೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಇಲ್ಲಿ ಸಿಗುವ ಪ್ರಜಾಪ್ರಭುತ್ವದ ಮಾದರಿ ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಶಾಲಾ ಪ್ರಧಾನಮಂತ್ರಿಯಾಗಿ 10ನೇ ವರ್ಗದ ಆದರ್ಶ ಹೆಗಡೆ, ಉಪ ಪ್ರಧಾನಿಯಾಗಿ 10ನೇ ವರ್ಗದ ವೈಷ್ಣವಿ ಭಟ್, ಸ್ವಚ್ಛತಾ ಮಂತ್ರಿಯಾಗಿ 9 ನೇ ವರ್ಗದ ಪ್ರೀತಿಕಾ ಹೆಗಡೆ, ಉಪ ಸ್ವಚ್ಛತಾ ಮಂತ್ರಿಯಾಗಿ 8 ನೇ ವರ್ಗದ ಪ್ರಾರ್ಥನಾ ಎಂ. ಭಟ್, ಗ್ರಂಥಾಲಯ ಮಂತ್ರಿಯಾಗಿ 9ನೇ ವರ್ಗದ ಸಾತ್ವಿಕ್ ಭಟ್,ಶಿಸ್ತು ಪಾಲನ ಮಂತ್ರಿಯಾಗಿ 10ನೇ ವರ್ಗದ ವೇದಾಂತ ಹಳದಿಪುರ್, ಉಪ ಶಿಸ್ತು ಪಾಲನ ಮಂತ್ರಿಯಾಗಿ 8ನೇ ವರ್ಗದ ಭುವನ್ ನಾಯ್ಕ್ ಹಾಗೂ 7ನೇ ವರ್ಗದ ಸ್ತುತಿ ಹೆಗಡೆ, ಕ್ರೀಡಾ ಮಂತ್ರಿಯಾಗಿ 10ನೇ ವರ್ಗದ ನಿಖಿತಾ ಭಟ್, ಉಪ ಕ್ರೀಡಾ ಮಂತ್ರಿಯಾಗಿ 7ನೇ ವರ್ಗದ ವಾಗೀಶ ಹೆಗಡೆ, ಸಾಂಸ್ಕೃತಿಕ ಮಂತ್ರಿಯಾಗಿ 9ನೇ ವರ್ಗದ ಖುಷಿ ಗೌಡ, ಉಪ ಸಾಂಸ್ಕೃತಿಕ ಮಂತ್ರಿಯಾಗಿ 8ನೇ ವರ್ಗದ ಪ್ರಾರ್ಥನಾ ಜಿ ಭಟ್, ಸಾರಿಗೆ ಮಂತ್ರಿಯಾಗಿ 9ನೇ ವರ್ಗದ ಸಂದೇಶ ಹೆಗಡೆ, ಉಪ ಸಾರಿಗೆ ಮಂತ್ರಿಯಾಗಿ 8ನೇ ವರ್ಗದ ಪ್ರಮಥ್ ಹೆಗಡೆ ಆಯ್ಕೆಯಾದರು.
“ಚಂದನ ಇಲಕ್ಟೋರಲ್ ಲಿಟರಸಿ ಕ್ಲಬ್ “ ಇದರ ಅಡಿಯಲ್ಲಿ ಶಿಕ್ಷಕ ಸಂತೋಷ್ ಕೆ. ಆಯ್. ನೇತೃತ್ವದಲ್ಲಿ ಎಲ್ಲಾ ಶಿಕ್ಷಕರ ಸಹಭಾಗಿತ್ವದಲ್ಲಿ ಜು.3ರಂದು ಶಾಲಾ ಸಂಸತ್ ಚುನಾವಣೆ ನಡೆದಿತ್ತು. 6 ರಿಂದ 10ನೇ ವರ್ಗದ ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಾಲಕರಾದ ಬಾಲಚಂದ್ರ ಹೆಗಡೆ,ಲಕ್ಷ್ಮಿ ಹೆಗಡೆ, ಶಿಕ್ಷಕರು ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.10ನೇ ವರ್ಗದ ಪ್ರತೀಕ್ಷಾ ಭಟ್ ಸ್ವಾಗತಿಸಿದರು, 9ನೇ ವರ್ಗದ ಮೋಹಿತ್ ವಂದಿಸಿದರು, 9ನೇ ವರ್ಗದ ಪ್ರತ್ಯುಷಾ ಹೆಗಡೆ ನಿರೂಪಿಸಿದರು.