• Slide
  Slide
  Slide
  previous arrow
  next arrow
 • ರಾಬಿತಾ ಸೊಸೈಟಿಯಿಂದ ಸಚಿವ ಮಂಕಾಳ ವೈದ್ಯಗೆ ಸನ್ಮಾನ

  300x250 AD

  ಭಟ್ಕಳ: ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸಚಿವ ಸ್ಥಾನ ಪಡೆದ ಮಂಕಾಳ್ ಎಸ್.ವೈದ್ಯರನ್ನು ರಾಬಿತಾ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಖ್ಯಾತ ಅನಿವಾಸಿ ಉದ್ಯಮಿ ಅತೀಕುರ್ ರಹಮಾನ್ ಮುನಿರಿ ರಬಿತಾ ಸೊಸೈಟಿ ಭಟ್ಕಳ (ಅನಿವಾಸಿ ಭಾರತೀಯರ ಸಂಘ) ಪರವಾಗಿ ಸಚಿವರನ್ನು ಅಭಿನಂದಿಸಿದರು.

  ಈ ಸಂದರ್ಭದಲ್ಲಿ ಸಚಿವ ವೈದ್ಯರ ಕುರಿತಂತೆ ಮೆಚ್ಚುಗೆ ಮಾತುಗಳನ್ನಾಡಿದ ಅವರು, ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಅಭೂತಪೂರ್ವ ಗೆಲುವಿಗಾಗಿ ರಾಬಿತಾ ಸೊಸೈಟಿಯ ಪರವಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಸಮರ್ಪಣೆ ಮತ್ತು ಸಾರ್ವಜನಿಕ ಸೇವೆಯಲ್ಲಿನ ಅಚಲ ಬದ್ಧತೆ ನಿಮ್ಮ ಪ್ರಚಂಡ ಗೆಲುವಿನ ಮೂಲಕ ವ್ಯಕ್ತವಾಗಿದೆ. ಭಟ್ಕಳದ ಜನತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅನಿವಾಸಿ ಭಟ್ಕಳಿ ಸಮುದಾಯದವರು ಅದೇ ಭಾವನೆಗಳನ್ನು ಹಂಚಿಕೊ0ಡಿದ್ದಾರೆ. ಭಟ್ಕಳ ಸಮುದಾಯವು ಗಲ್ಫ್ ದೇಶಗಳಲ್ಲಿ ನೆಲೆಸಿದ್ದರೂ, ಅವರ ಹೃದಯವು ಯಾವಾಗಲೂ ತಮ್ಮ ತಾಯ್ನಾಡಿಗಾಗಿ ಮಿಡಿಯುತ್ತದೆ ಮತ್ತು ಭಟ್ಕಳದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.
  ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ನಗರದ ಒಳಚರಂಡಿ ವ್ಯವಸ್ಥೆ ಸುಧಾರಣೆ, ಶುದ್ಧ ಕುಡಿಯುವ ನೀರಿನ ಬಾವಿಗಳ ಅಗತ್ಯತೆ, ಮೀನು ಮಾರುಕಟ್ಟೆ ಸ್ಥಳಾಂತರ, ಈದ್ಗಾ ಮುಂಭಾಗ ಅಂಗಡಿ ಮುಂಗಟ್ಟುಗಳ ತೆರವು ಸೇರಿದಂತೆ ಕೆಲವು ಒತ್ತುವರಿ ಸಮಸ್ಯೆಗಳ ಬಗ್ಗೆಯೂ ಮುನಿರಿ ಗಮನ ಸೆಳೆದರು. ಹೆಬಳೆ ಪಂಚಾಯಿತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿವೇಶನ ಹಂಚಿಕೆ, ಸುಸಜ್ಜಿತ ಕ್ರೀಡಾ ಮೈದಾನ ಸ್ಥಾಪನೆ, ಭಟ್ಕಳ ತಾಲೂಕಿನ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣ, ಈ ಸಮಸ್ಯೆಗಳನ್ನು ಪರಿಹರಿಸುವಂತೆ ಅವರು ಸಚಿವರನ್ನು ಒತ್ತಾಯಿಸಿದರು.
  ಸರ್ಕಾರ, ತಂಝೀಮ್ ಮತ್ತು ರಬಿತಾ ಸಂಘಟನೆಯ ಸಹಯೋಗದೊಂದಿಗೆ ಈ ಸಮಸ್ಯೆಗಳನ್ನು ಪರಿಹರಿಸಲು ರಬಿತಾ ಸೊಸೈಟಿಯ ಸಂಪೂರ್ಣ ಬೆಂಬಲ ನೀಡುವುದಾಗಿ ಮುನೀರಿ ಭರವಸೆ ನೀಡಿದರು. ಸನ್ಮಾನ ಸಮಾರಂಭದಲ್ಲಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಸಾದಿಕ್ ಪಿಲ್ಲೂರ್, ರಬಿತಾ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ, ಎಸ್.ಜೆ. ಹಾಶಿಮ್, ಸದಸ್ಯರಾದ ಹಬೀಬುಲ್ಲಾ ಮೊಹತೇಶಮ್, ಮುಬೀನ್ ದಿಲ್ದಾರ್, ಇದ್ರೀಸ್ ಸಿದ್ದಿಬಾಪ, ತಾಹಿರ್ ಕಾಜಿಯಾ ಅಬ್ದುಸ್ಸಾಮಿ ಕೋಲಾ, ಫಜಲುರಹ್ಮಾನ್ ಮುನಿರಿ, ಫಾಯಿಖ್ ಉದ್ಯಾವರ ಮತ್ತಿತರರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top