Slide
Slide
Slide
previous arrow
next arrow

ಇತಿಹಾಸ ಅರಿತವರಿಂದ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ: ಪ್ರಹ್ಲಾದ್ ಜೋಶಿ

300x250 AD

ಹಳಿಯಾಳ: ಇತಿಹಾಸವನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೋ, ಅವರು ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಪಟ್ಟಣದ ಮರಾಠಾ ಭವನದಲ್ಲಿ ತಾಲ್ಲೂಕಿನ ವಾರಕರಿ, ವಿವಿಧ ಸಂಘ- ಸಂಸ್ಥೆಗಳು ಹಾಗೂ ಗುರುಪೂರ್ಣಿಮೆ ಸೇವಾ ಸಮಿತಿಯವರಿಂದ ಆಯೋಜಿಸಿದ್ದ ಗುರುಪೂರ್ಣಿಮೆ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರು ತಮಗಾಗಿ ಸಾಮ್ರಾಜ್ಯ ಸ್ಥಾಪಿಸದೆ ರಾಷ್ಟ್ರ ಮತ್ತು ಧರ್ಮಕ್ಕಾಗಿ ಹಿಂದವಿ ಸ್ವರಾಜ್ಯ ಸ್ಥಾಪನೆ ಮಾಡಿದ ಅಜರಾಮರ ವಿಶ್ವನಾಯಕರು. ಶಿವಾಜಿ ಮಹಾರಾಜರು ಕೇವಲ ಮರಾಠಾ ಸಮಾಜಕ್ಕೆ ಸೀಮಿತರಾಗದೇ ಎಲ್ಲ ಸಮಾಜದ ಏಳಿಗೆಗೆ ಪ್ರಯತ್ನಿಸಿ, ಸ್ವರಾಜ್ಯ ಸ್ಥಾಪಿಸಿದವರು ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.
ದೇಶದಲ್ಲಿ ಗುಲಾಮಿ ಪರಂಪರೆಯನ್ನು ಇನ್ನೂ ಮುಂದುವರೆಸಿಕೊ0ಡು ಬರಲಾಗುತ್ತಿದೆ. ಜಾತೀಯತೆ ಹೆಚ್ಚಾಗುತ್ತಿದೆ. ಪಠ್ಯ ಪುಸ್ತಕಗಳ ಪುನ ರಚನೆಯ ಬಗ್ಗೆ ನೋಡಿದಾಗ ಅನೇಕ ಬದಲಾವಣೆಗಳಾಗಿರುವುದನ್ನು ನೊಡುತ್ತಿರುವೆವು ಎಂದ ಸಚಿವರು, ನಮ್ಮ ಸಂಸ್ಕೃತಿಯನ್ನು ನಾವು ಮರೆಯಬಾರದು. ನಮ್ಮ ಸನಾತನ ಪರಂಪರೆ ಅತಿ ಶ್ರೇಷ್ಠವಾಗಿದೆ ಎಂದ ಅವರು, ಮಂಜುನಾಥ ಭಾರತಿ ಸ್ವಾಮಿಜಿಗಳು ರಾಷ್ಟ್ರ, ಧರ್ಮಕ್ಕಾಗಿ ಅಪಾರ ಸೇವೆ ಸಲ್ಲಿಸುತ್ತಿದ್ದು, ಅವರು ಭಗವದ್ಗೀತೆಯನ್ನು 56 ರಾಗಗಳಲ್ಲಿ ಹಾಡಿ ಎಲ್ಲರಿಗೂ ತಿಳಿಯುವ ಹಾಗೆ ಮಾಡಿರುವ ಕಾರ್ಯಕ್ಕೆ ಪ್ರಧಾನಿ ಮೋದಿಯವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಸ್ವಾಮಿಜಿಯವರ ಸಮಾಜಮುಖಿ ಕಾರ್ಯಕ್ಕೆ ನಮ್ಮ ಬೆಂಬಲ, ಸಹಾಯ- ಸಹಕಾರ ಸದಾಕಾಲವಿರುತ್ತದೆ ಎಂದು ಭರವಸೆ ನೀಡಿದರು.

ಗೋಸ್ವಾಮಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ, ದೇಶ ಸುಧಾರಣೆಯಾಗಬೇಕಾದರೆ ರಾಜನೀತಿ, ಜೀವನಶೈಲಿ ಸುಧಾರಣೆಯಾಗಬೇಕು. ನಾಯಕರಾದವರು ಎಲ್ಲಿಯವರೆಗೆ ಸತ್ಯ ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಸುಧಾರಣೆ ಆಗುವುದಿಲ್ಲ ಎಂದರು. ಹಳಿಯಾಳ ಕ್ಷೇತ್ರದ ಹವಗಿಯಲ್ಲಿ ಹೊಂದಿರುವ 3 ಎಕರೆ ಜಮೀನಿನಲ್ಲಿ ಮಠದ ವತಿಯಿಂದ ದೇವಸ್ಥಾನ, ಸುಮಾರು 1000 ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯ, ಗುರುಕುಲ ಮಾದರಿ ಶಾಲೆ, ಆಧುನಿಕ ಗ್ರಂಥಾಲಯ, ಆರೋಗ್ಯಕೇಂದ್ರ, ಗೋಶಾಲೆ, ಯಾತ್ರಿನಿವಾಸ ಹಾಗೂ ಸಮುದಾಯಭವನ ನಿರ್ಮಾಣ ಹಾಗೂ ಇನ್ನಿತರೆ ಯೋಜನೆಗಳ ಮೂಲಕ ಆಧ್ಯಾತ್ಮಿಕ ಶೈಕ್ಷಣಿಕ, ಸಾಂಸ್ಕೃತಿಕ ಏಳಿಗೆಗಾಗಿ ಎಲ್ಲ ಜನಾಂಗಕ್ಕೆ ಅನೂಕೂಲವಾಗುವಂತೆ ಅಭಿವೃದ್ಧಿ ಕಾರ್ಯ ಮಾಡಲು ರೂಪುರೇಷೆ ತಯಾರಿಸಿದ್ದು, ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ನೆರವಿನ ಅವಶ್ಯಕತೆ ಇದೆ ಎಂದು ಮನವಿ ಮಾಡಿದರಲ್ಲದೇ, ಸಚಿವ ಪ್ರಹ್ಲಾದ್ ಜೋಶಿಯವರಿಗೆ ಲಿಖಿತ ಮನವಿ ಕೂಡ ಸಲ್ಲಿಸಿದರು.

300x250 AD

ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಸ್ವಾಮೀಜಿಯವರು ಕೈಗೊಳ್ಳುವ ಎಲ್ಲ ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಸಹಾಯ ಸಹಕಾರ ಮಾಡುವ ಭರವಸೆ ನೀಡಿದರು. ವೇದಿಕೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ, ಪ್ರಮುಖರಾದ ಡಾ.ಶೇಖರ ಮಾನೆ, ಮಂಗೇಶ ದೇಶಪಾಂಡೆ, ಸುಭಾಷ ಕೋರ್ವೆಕರ, ಮಂಗಲಾ ಕಶೀಲಕರ, ಸುಮಂಗಲಾ ಅಂಗಡಿ, ಕಮಲೇಶ ಪಡತಾರೆ, ನಾರಾಯಣ ಟೊಸುರ, ಎನ್ ಎಸ್ ಜಿವೊಜಿ, ಚೂಡಪ್ಪ ಬೋಬಾಟಿ ಇದ್ದರು. ಕೆಕೆಎಮ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಫಾಕ್ರೆ ಸ್ವಾಗತಿಸಿದರು. ಭಾರತಿ ನಲವಡೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top