• Slide
    Slide
    Slide
    previous arrow
    next arrow
  • ಅಂಕೋಲಾ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಡಾ.ವಿಜಯದೀಪ್

    300x250 AD

    ಅಂಕೋಲಾದ ಪ್ರಮುಖ ಸೇವಾ ಸಂಸ್ಥೆಗಳಲ್ಲಿ ಒಂದಾದ ಅಂಕೋಲಾ ಸಿಟಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಡಾ.ವಿಜಯದೀಪ್, ನಗರದ ಪ್ರಮುಖ ಯುವ ಉದ್ಯಮಿ ಮತ್ತು ‘ಈಸಿ ಮಾರ್ಟ್’ ಮಾಲೀಕ ಪ್ರದೀಪ ರಾಯ್ಕರ ನೂತನ ಕಾರ್ಯದರ್ಶಿಗಳಾಗಿ ಹಾಗೂ ವಿಶ್ರಾಂತ ಮುಖ್ಯಾಧ್ಯಾಪಕ ಉದಯಾನಂದ ನೇರಲಕಟ್ಟೆ ಖಜಾಂಚಿಗಳಾಗಿ ಆಯ್ಕೆಯಾಗಿದ್ದಾರೆ.

    ಪ್ರಥಮ ಉಪಾಧ್ಯಕ್ಷರಾಗಿ ಪ್ರತಿಭಾ ಬೋರಕರ ಹಾಗೂ ವಿಜಯಲಕ್ಷ್ಮಿ ಭಟ್, ಎಲ್‌ಸಿಐಎಫ್ ಕೋ- .ಆರ್ಡಿನೇಟರ್ ಆಗಿ ಜಯಶ್ರೀ (ಜೀವಿಕಾ) ಶೆಟ್ಟಿ, ಕ್ಲಬ್ ಸರ್ವಿಸ್ ಚೇರಪರ್ಸನ್‌ರಾಗಿ ಮಾಯಾ ಶೆಟ್ಟಿ, ಕ್ಲಬ್ ಮಾರ್ಕೇಟಿಂಗ್ ಮತ್ತು ಸರ್ವಿಸ್ ಚೇರ್‌ಪರ್ಸನ್‌ರಾಗಿ ಸುರೇಶ ಡಿ.ನಾಯ್ಕ, ಸದಸ್ಯತ್ವ ಸಮಿತಿ ಅಧ್ಯಕ್ಷರಾಗಿ ಮೋಹನ ಎಸ್.ಶೆಟ್ಟಿ, ಆಡಳಿತಾಧಿಕಾರಿಗಳಾಗಿ ನಾರಾಯಣ ಎಚ್.ನಾಯ್ಕ, ಲಯನ್ಸ್ ಕ್ಲಬ್ ನಿರ್ದೇಶಕರಾಗಿ ನಾರಾಯಣ ಎ.ನಾಯ್ಕ, ಶಶಿಧರ ಶೇಣ್ವಿ, ಪ್ರೊ.ಬಿ.ಆರ್.ರಾಜು, ಡಾ.ಪ್ರೊ.ಶಾಂತಾರಾಮ ಶಿರೋಡ್ಕರ, ಕಮಲಾಕರ ಬೋರಕರ ಚುನಾಯಿತರಾದರು.

    300x250 AD

    ಜುಲೈ 12ರದು ಸಂಜೆ 6.30ಕ್ಕೆ ನಗರದ ಹೊಟೇಲ್ ಗೋಕುಲ್ ರೆಸಿಡೆನ್ಸಿಯಲ್ಲಿ ನೂತನ ಪದಾಧಿಕಾರಿಗಳ ‘ಪದಗ್ರಹಣ’ ಸಮಾರಂಭ ಏರ್ಪಡಲಿದೆ. ಲಯನ್ಸ್ ಇಂಟರ್ ನ್ಯಾಶನಲ್ 317ಬಿಯ ವೈಸ್ ಡಿಸ್ಟಿಕ್ಟ್ ಗವರ್ನರ್ ಎಂ.ಜೆ.ಎಫ್ ಲಾ. ಮಹಮ್ಮದ ಹನೀಪ್ ಪದಗ್ರಹಣಾಧಿಕಾರಿಗಳಾಗಿ ಆಗಮಿಸಲಿರುವರು. ಮುಖ್ಯ ಅತಿಥಿಗಳಾಗಿ ಹರಿಪ್ರಸಾದ ರಾಯ್ ಎಲ್‌ಸಿಐಎಫ್ ಕೋ- ಆರ್ಡಿನೇಟರ್ ಡಿಸ್ಟ್ರಿಕ್ಟ್ 317ಸಿ ಇವರು ಪಾಲ್ಗೊಳ್ಳಲಿರುವರು.

    Share This
    300x250 AD
    300x250 AD
    300x250 AD
    Leaderboard Ad
    Back to top