• Slide
    Slide
    Slide
    previous arrow
    next arrow
  • ಗುಣವಂತೆಯಲ್ಲಿ ವೇದೋಪಾಸನ ಟ್ರಸ್ಟ್ನಿಂದ ಧಾರ್ಮಿಕ ಕಾರ್ಯಕ್ರಮ

    300x250 AD

    ಹೊನ್ನಾವರ: ಪಂಚಕ್ಷೇತ್ರಗಳಲ್ಲಿ ಒಂದಾದ ಗುಣವಂತೆ ಶಂಭುಲಿOಗೇಶ್ವರನ ದಿವ್ಯ ಸನ್ನಿಧಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ವೇದೋಪಾಸನ ಟ್ರಸ್ಟ್ ಆಶ್ರಯದಲ್ಲಿ ಎಲ್ಲಾ ವೈದಿಕರ ಪಾಲ್ಗೊಳ್ಳುವಿಕೆ ಸಹಾಯ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

    ದೇವಸ್ಥಾನದಲ್ಲಿ ಮಹಾರುದ್ರ ಪುರಶ್ವರಣ, ನವಗ್ರಹ ಮಹಾಯಜ್ಞ, ಲಘುರುದ್ರ ಪುರಶ್ಚರಣ, ಗಾಯತ್ರೀ ಪುರಶ್ಚರಣ,ಲಘುರುದ್ರ ಪುರಶ್ಚರಣ, ವಿಶ್ವಭೇಷಜ ಹವನ, ಲಘುರುದ್ರ ಪುರಶ್ಚರಣ, ಮಹಾಪುರುಷ ಪರಿಚರ್ಯಾ, ಲಘುರುದ್ರ ಪುರಶ್ಚರಣ ಹೀಗೆಯೆ ರಾಷ್ಟ್ರಕ್ಷೇಮಕ್ಕಾಗಿ ಐದು ವರ್ಷಗಳಿಂದ ನಡೆಯುತ್ತಿದೆ. ಅದೇ ಪ್ರಕಾರವಾಗಿ ‘ಯಜ್ಞೋ ವೈ ಶ್ರೇಷ್ಠತಮಂ ಕರ್ಮ’ ಅನ್ನುವಂತೆ ಈ ಬಾರಿಯೂ ಸಹ ನಿಸ್ವಾರ್ಥ ಶ್ರೇಷ್ಠ ಸೇವೆಯ ಸಂಕಲ್ಪದಲ್ಲಿ ವೇದಪುರುಷನ ಪರಮಾನುಗ್ರಹಕ್ಕಾಗಿ ಆಷಾಢ ಕೃಷ್ಣ ಷಷ್ಠಿ, ಸಪ್ತಮಿಯಂದು ಈ ಎರಡೂ ದಿನಗಳ ಕಾಲ ವೈದಿಕರೆಲ್ಲರ ಸೇವಾಸಹಕಾರದೊಂದಿಗೆ ಆರನೇ ಹೆಜ್ಜೆಯಾಗಿ ‘ಸಮಗ್ರ ನಕ್ಷತ್ರ ಮಹಾಯಜ್ಞ’ ಎನ್ನುವ 25000 ಸಾವಿರಕ್ಕೂ ಹೆಚ್ಚಿನ ಹೋಮಾಹುತಿಯೊಂದಿಗೆ ಯಜ್ಞೇಶ್ವರನ ಸಾಕ್ಷಿಯಾಗಿ ಪರಮಾತ್ಮನಿಗೆ ಸಮರ್ಪಣೆ ಆಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top