• Slide
    Slide
    Slide
    previous arrow
    next arrow
  • ಗುತ್ತಿಗೆ ಕಂಪನಿಯ ನಿರ್ಲಕ್ಷ್ಯ ಕೆಲಸ: ಪಾದಚಾರಿಗಳಿಗೂ ಓಡಾಡಲಾಗದ ಸ್ಥಿತಿ

    300x250 AD

    ಗೋಕರ್ಣ: ಮಂಜಗುಣಿ-ಗಂಗಾವಳಿ ನಡುವೆ ಜನಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಸತತವಾಗಿ ಸುರಿಯುವ ಮಳೆಯಿಂದಾಗಿ ಗುತ್ತಿಗೆ ಕಂಪನಿಯವರು ಹಾಕಲಾಗಿದ್ದ ಮಣ್ಣು ಅಂಟಾಗಿರುವುದರಿಂದ ಜನರ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
    ಸಾಕಷ್ಟು ಸಣ್ಣ ಸಣ್ಣ ಕಲ್ಲು ಮಿಶ್ರಿತ ಮಣ್ಣುಗಳಿದ್ದರೂ ಕೂಡ ಅದನ್ನು ಹಾಕಿ ಜನರಿಗೆ ಅನುಕೂಲ ಮಾಡಿಕೊಡುವುದರ ಬದಲು ಇನ್ನಷ್ಟು ಸಮಸ್ಯೆ ತಂದಿಟ್ಟಿದಂತಾಗಿದೆ. ಕೆಲ ದಿನಗಳ ಹಿಂದೆ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ ಸ್ಥಳಕ್ಕೆ ಬೇಟಿ ನೀಡಿ ಮೂರು ದಿನಗಳ ಒಳಗಾಗಿ ಬೈಕ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದ್ದರು. ಆದರೆ ಸತತ ಮಳೆಯ ಕಾರಣದಿಂದ ಅದನ್ನು ಇನ್ನುವರೆಗೂ ಪೂರ್ಣಗೊಳಿಸಿಲ್ಲ. ಗಂಗಾವಳಿ ಭಾಗದಲ್ಲಿ ಮಾತ್ರ ಸಲಕರಣೆ ತಂದಿಟ್ಟಿದ್ದು, ಇನ್ನು ಮಂಜಗುಣಿಯಲ್ಲೂ ಕೂಡ ತಕ್ಷಣ ಬೈಕ್ ಸಂಚರಿಸುವ ವ್ಯವಸ್ಥೆ ಮತ್ತು ಪಾದಚಾರಿಗಳಿಗೆ ಮಳೆಗೆ ಕಾಲು ಹುಗಿಯದಂತೆ ಗಟ್ಟಿ ಮಣ್ಣನ್ನು ಹಾಕಬೇಕಾದ ಅಗತ್ಯವಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top