Slide
Slide
Slide
previous arrow
next arrow

ದಾಂಡೇಲಿಯಲ್ಲಿ ವಾಣಿಜ್ಯ ಕಾಮ್.ಯುನಿಟಿ ಹಬ್ಬ

300x250 AD

ದಾಂಡೇಲಿ: ಬಂಗೂರನಗರ ಪದವಿ ಮಹಾವಿದ್ಯಾಲಯದ ಆಶ್ರಯದಡಿ ತಾಲ್ಲೂಕು ಮಟ್ಟದ ವಾಣಿಜ್ಯ ಕಾಮ್.ಯುನಿಟಿ 2023 ಹಬ್ಬವನ್ನು ಕಾಲೇಜಿನ ಗ್ರಂಥಾಲಯದ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯರಾದ ಡಾ.ಎ.ಡಿ.ಭಟ್‌ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ವಾಣಿಜ್ಯ ಶಾಸ್ತ್ರದಲ್ಲಿರುವ ಉತ್ತಮ ಭವಿಷ್ಯದ ಕುರಿತು ಅರಿವನ್ನು ಮೂಡಿಸಿದರು. ಅಂತರಾಷ್ಟ್ರೀಯ ಮಟ್ಟದವರೆಗೆ ಹಬ್ಬಿರುವ ತಮ್ಮ ವಿದ್ಯಾರ್ಥಿಗಳ ಸಾಧನೆಗಳನ್ನು ವಿವರಿಸಿದರು. ಪ್ರತಿಒಯೊಬ್ಬರ ಜೀವನವೆ ಒಂದು ಲೆಕ್ಕದ ಮೂಲಕ ಆರಂಭಗೊಳ್ಳುತ್ತದೆ. ಹುಟ್ಟು, ಬದುಕು, ಸಾವಿನ ನಡುವೆ ಲೆಕ್ಕ ಮಾತ್ರ ನಿರಂತರವಾಗಿರುತ್ತದೆ ಎಂದ ಅವರು ವಾಣಿಜ್ಯ ಶಾಸ್ತ್ರಕ್ಕೆ ಎಂದು ಸಾವಿಲ್ಲ. ಅದು ನಿರಂತರವಾದ ಪ್ರಕ್ರಿಯೆ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಎಲ್.ಗುಂಡೂರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಕರ‍್ಯಕ್ರಮ ಪರಿಣಾಮಕಾರಿಯಾಗಿದೆ ಎಂದರು. ನಿವೃತ್ತ ಪ್ರಾಚಾರ್ಯರಾದ ಡಾ.ಎ.ಡಿ.ಭಟ್ ಮತ್ತು ಪಿಎಚ್‌ಡಿ ಪದವಿಗೆ ಭಾಜನರಾದ ಪ್ರಾಧ್ಯಾಪಕಿ ಡಾ.ಲಕ್ಷ್ಮಿ ಬಿ.ಪರಬ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.  

300x250 AD

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಅಶಿತಾ ಸಾಲ್ಡಾನಾ ಸ್ವಾಗತಿಸಿದರೆ, ರಾಹಿಲಾ ಡಿ. ಸನದಿಯವರು ಕಾರ್ಯಕ್ರಮದ ರೂಪರೇಷೆಗಳನ್ನು ಮತ್ತು ಪ್ರಸ್ತುತ ವಾಣಿಜ್ಯ ವಿದ್ಯಾರ್ಥಿಗಳ ಸಾಧನೆಯ ವರದಿ ವಾಚಿಸಿದರು. ಈ ಕಾರ್ಯಕ್ರಮದಲ್ಲಿ ಒಟ್ಟೂ 12 ತಂಡಗಳಿದ್ದು, ಅದರಲ್ಲಿ ಬಂಗೂರನಗರ ಪದವಿ ಪೂರ್ವ ಹಾಗೂ ಜನತಾ ಪದವಿ ಪೂರ್ವ ವಿದ್ಯಾರ್ಥಿಗಳು ಭಾಗವಹಿಸಿದ್ದರು ಹಳೆ ವಿದ್ಯಾರ್ಥಿ ರಾಘವೇಂದ್ರ ಶೆಟ್ಟಿ ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದರು.

ಬಂಗೂರನಗರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಆಶಾಲತಾ ಜೈನ್‌ರವರು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ವಿಶಾಲ್ ಮಾನೆ ಹಾಗೂ ಕುಸುಮ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಲಕ್ಷ್ಮಿ ಬಿ.ಪರಬರವರು ವಂದಿಸಿದರು.

Share This
300x250 AD
300x250 AD
300x250 AD
Back to top