• Slide
    Slide
    Slide
    previous arrow
    next arrow
  • ಡೆಂಘೀ ವಿರೋಧಿ ಮಾಸಾಚರಣೆ; ಜಾಗೃತಿ ಜಾಥಾ

    300x250 AD

    ದಾಂಡೇಲಿ: ತಾಲ್ಲೂಕು ಸಾರ್ವಜನಿಕ ಆರೋಗ್ಯ ಇಲಾಖೆ, ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಡೆಂಘೀ ವಿರೋಧಿ ಮಾಸಾಚರಣೆ ಕಾರ್ಯಕ್ರಮಕ್ಕೆ ನಗರಸಭೆಯ ಆವರಣದಲ್ಲಿ ಚಾಲನೆಯನ್ನು ನೀಡಲಾಯಿತು.

    ಡೆಂಘೀ ವಿರೋಧಿ ಜಾಗೃತಿ ಜಾಥಾಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಪೌರಾಯುಕ್ತ ಆರ್.ಎಸ್.ಪವಾರ್ ಅವರು ಕೀಟಜನ್ಯ ರೋಗಗಳು ಬಾರದಂತೆ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರಿನ ಸಂಗ್ರಹಣೆಯ ಪರಿಕರಗಳನ್ನು ಮೇಲಿಂದ ಮೇಲೆ ಸ್ವಚ್ಚಗಿಳಿಸುತ್ತಿರಬೇಕು. ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಕಸ ಸಂಗ್ರಹಕಾರರಿಗೆ ನೀಡುವ ಮೂಲಕ ಸ್ವಚ್ಚತೆಗೆ ಮೊದಲ ಆದ್ಯತೆಯನ್ನು ನೀಡಿದಾಗ ಡೆಂಘೀ ಕಾಯಿಲೆಯಿಂದ ದೂರವಿರಲು ಸಾಧ್ಯ ಎಂದರು.

    ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಮಾತನಾಡಿ, ಡೆಂಘೀ ಜ್ವರ ನಮ್ಮ ಬೇಜಾವಾಬ್ದಾರಿ ಮತ್ತು ಅಸ್ವಚ್ಚತೆಯಿಂದಲೆ ಬರುವ ರೋಗ. ಸ್ವಚ್ಚತೆಗೆ ಆಧ್ಯತೆ ನೀಡಿದಷ್ಟು ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಲು ಸಾಧ್ಯ. ನಮ್ಮ ಮನೆ, ನಾವು ವಾಸಿಸುವ ಮನೆಯ ಸುತ್ತಮುತ್ತಲು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮ ನಮ್ಮ ಜವಾಬ್ದಾರಿ. ಆ ಜವಾಬ್ದಾರಿಯನ್ನು ಮರೆತಾಗ ಮಾತ್ರ ಅಸ್ವಚ್ಚತೆ ನಿರ್ಮಾಣವಾಗಿ ಸಾಂಕ್ರಾಮಿಕ ರೋಗಗಳು ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.

    300x250 AD

    ಈ ಸಂದರ್ಭದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿವೇಣಿ, ನಗರಸಭೆಯ ಪರಿಸರ ಎಚಿಜಿನಿಯರ್ ಶುಭಂ, ಆರೋಗ್ಯ ನಿರೀಕ್ಷಕ ವಿಲಾಸ್, ಆರೋಗ್ಯ ಇಲಾಖೆಯ ನಿರೀಕ್ಷಕ ನಾಗರಾಜ ಹೊಸಮನಿ, ನಗರಸಭೆ ಮತ್ತು ತಾಲ್ಲೂಕು ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕರ‍್ಯಕರ್ತೆಯರು ಹಾಗೂ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡೆಂಘೀ ವಿರೋಧಿ ಜಾಗೃತಿ ಜಾಥಾವು ನಗರಸಭೆಯ ಆವರಣದಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

    Share This
    300x250 AD
    300x250 AD
    300x250 AD
    Leaderboard Ad
    Back to top