ಕಾರವಾರ: ತೋಟಗಾರಿಕೆ ಇಲಾಖೆಯು ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಬೆಳೆಸಿರುವ ಸಸಿಗಳು ಸರ್ಕಾರಿ ದರಗಳಲ್ಲಿ ಮಾರಾಟಕ್ಕಿವೆ.
ಉತ್ತಮ ಜಾತಿಯ ವಿವಿಧ ಹಣ್ಣುಗಳು, ಸಾಂಬಾರ ಬೆಳೆಗಳಾದ ಅಡಿಕೆ, ಕಾಳುಮೆಣಸು ಸಸಿ, ಕಸಿ ಕಾಲುಮೆಣಸು, ತೆಂಗು, ಮಾವು, ಗೇರು, ಸಪೋಟಾ, ನಿಂಬೆ, ಕರಿಬೇವು, ಲವಂಗ, ದಾಲ್ಚಿನಿ, ಹಲಸು ಮುಂತಾದ ವಾಣಿಜ್ಯ ಬೆಳೆಗಳ ಸಸಿ ಕಸಿಗಳು ಮಾರಾಟಕ್ಕೆ ಲಭ್ಯವಿದೆ. ಖರೀದಿಸಲು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.