Slide
Slide
Slide
previous arrow
next arrow

ಸಿದ್ದರಾಮಯ್ಯನವರದ್ದು ಅಲ್ಪಸಂಖ್ಯಾತರ ಪರವಾದ ಬಜೆಟ್; ರಾಜೇಶ ಶೆಟ್ಟಿ ಲೇವಡಿ

300x250 AD

ಶಿರಸಿ: ಕರ್ನಾಟಕದ ಬಹುಸಂಖ್ಯಾತ ಜನರ ನೀರಿಕ್ಷೆಯನ್ನು ಮೀರಿ 2023 ರ ಆರ್ಥಿಕ ವರ್ಷದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಠೀಕರಣದಲ್ಲಿ ವಿಕೃತ ಆನಂದ ಅನುಭವಿಸುತ್ತಿರುವುದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ಬಿಜೆಪಿ ಶಿರಸಿ ನಗರ ಮಂಡಲ ಅಧ್ಯಕ್ಷ ರಾಜೇಶ್ ಶೆಟ್ಟಿ ಹೇಳಿದ್ದಾರೆ.

ಓಲೈಕೆಯ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕನ್ನಡ ಜಿಲ್ಲೆಯ ವಿಚಾರದಲ್ಲಿ ಸ್ಪಷ್ಟ ತಾರತಮ್ಯದೊಂದಿಗೆ ಮಲತಾಯಿ ಧೋರಣೆ ಅನುಸರಿಸಿದ್ದಾರೆ. ಹಿಂದಿನ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನಿರಂತರ ಪ್ರಯತ್ನದ ಫಲವಾಗಿ ಶಿರಸಿ ತಾಲೂಕಿಗೆ ಒದಗಿ ಬಂದ ದೇಶದಲ್ಲೇ ಮೊದಲ ಪರಿಸರ ವಿಶ್ವ ವಿದ್ಯಾಲಯವನ್ನು ಪ್ರಸ್ತಾಪಿಸದೇ ಇರುವುದು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಿಚಾರ ಕೈ ಬಿಟ್ಟಿರುವುದು,ಉತ್ತರಕನ್ನಡ ಜಿಲ್ಲೆಯ ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ಸಾರಾಸಗಟಾಗಿ ಅಸಡ್ಡೆ ತೋರಿದ್ದಾರೆ. ಜಿಲ್ಲೆಗೊಂದು ಗೋಶಾಲೆ ಯೋಜನೆ ಕೈ ಬಿಟ್ಟಿದ್ದಾರೆ. ವಿವೇಕ ಶಾಲೆ ಅಭಿವೃದ್ದಿ ಮತ್ತು ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಗೆ ಹಾಗೂ ದೇಶ ಕಾಯುವ ಸೈನಿಕರನ್ನು ರೂಪಿಸುವ ಅಗ್ನೀವೀರ ತರಬೇತಿ ಯೋಜನೆಗೆ ಕೊಕ್ ನೀಡಿದ್ದಾರೆ.ಈ ಬಗ್ಗೆ ಯಾವುದೇ ರೀತಿಯ ಸಮರ್ಥನೆ ತೋರದ ಜಿಲ್ಲೆಯ ಆಡಳಿತ ಪಕ್ಷದ ಶಾಸಕರ ಮತ್ತು ಉಸ್ತುವಾರಿ ಸಚಿವರ ದಿವ್ಯ ಮೌನ ಅವರ ಅಸಮರ್ಥತೆಯನ್ನು ತೋರಿಸುತ್ತದೆ.

ಶಿರಸಿ ಜಿಲ್ಲೆಯ ಹೋರಾಟದ ಬಗ್ಗೆ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದ ಶಾಸಕರು ಈ ಬಗ್ಗೆ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕಾಗಿತ್ತು. ಜಾತೀಯತೆ ತುಷ್ಠೀಕರಣದಿಂದಾಗಿ ಭಾರತವನ್ನು ಮುಸ್ಲೀಮೀಕರಣ ಮಾಡುವ ಹೆಬ್ಬಾಗಿಲಾಗಿ ಕರ್ನಾಟಕವನ್ನು ಪ್ರೇರೆಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಬಾರಿಯ ಬಜೆಟ್ ಸ್ವಪಕ್ಷೀಯರಿಗೇ ಮುಜುಗರ ತರುವಂತಿದೆ.ಒಟ್ಟಾರೆ ಈ ಬಜೆಟ್ ಮುಖ್ಯಮಂತ್ರಿಗಳ ಬದಲಿಗೆ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರು ಮಂಡಿಸಿದಂತಿದೆ ಎಂದು ಲೇವಡಿ ಮಾಡಿದ್ದಾರೆ.

300x250 AD

Share This
300x250 AD
300x250 AD
300x250 AD
Back to top