ಶಿರಸಿ: ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಮೂಡಿಸುವ ಸಲುವಾಗಿ ಇತ್ತೀಚೆಗೆ ಚುನಾವಣೆಯನ್ನು ಏರ್ಪಡಿಸಲಾಗಿತ್ತು.
ಶಿಸ್ತು, ಸಮಯ ನಿರ್ವಹಣೆಗಳನ್ನು ಪರಿಗಣಿಸಿ ಮೊಟ್ಟಮೊದಲ ಬಾರಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಎಲೆಕ್ಟ್ರಾನಿಕ್ ಮತಯಂತ್ರದ ಮೊಬೈಲ್ ಆಪ್ ಬಳಸಿ ಮತದಾನ ಪದ್ದತಿಯನ್ನು ಏರ್ಪಡಿಸಲಾಗಿತ್ತು. ಈ ಹೊಸ ಮತದಾನ ಪದ್ಧತಿಯು ಪ್ರಥಮ ಪ್ರಯತ್ನದಲ್ಲೇ ಯಶಸ್ಸನ್ನು ಕಂಡಿದ್ದರಿಂದ ಆ ಸಮಯದಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಲ.ಪ್ರೊ. ರವಿ ನಾಯಕ್ ಸಂತಸ ವ್ಯಕ್ತಪಡಿಸಿದರು. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶಶಾಂಕ್ ಹೆಗಡೆ ಮಾರ್ಗದರ್ಶನದಲ್ಲಿ, ಸಹ ಶಿಕ್ಷಕಿಯರಾದ ಶ್ರೀಮತಿ ಗೀತಾ ನಾಯ್ಕ್ ಮತ್ತು ಶ್ರೀಮತಿ ರೇಷ್ಮಾ ಮಿರಾಂಡ ನೇತೃತ್ವದಲ್ಲಿ ಶಿಕ್ಷಕವೃಂದದವರ ಸಹಕಾರದೊಂದಿಗೆ ಚುನಾವಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. 6- 10ನೇ ತರಗತಿ ವಿದ್ಯಾರ್ಥಿಗಳು ಉತ್ಸಾಹದಿಂದ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಶಾಲಾ ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷನಾಗಿ ಕುಮಾರ್ ಕೌಶಿಕ್ ನಾಯ್ಕ್, ಉಪಾಧ್ಯಕ್ಷನಾಗಿ ಕುಮಾರ್ ವಿಭವ್ ಭಾಗ್ವತ್, ಶಿಸ್ತಿನ ಮಂತ್ರಿಗಳಾಗಿ ಶ್ರೇಯಸ್ ಬಿ ಮ್ಯಾಗೇರಿ, ಬಿ ಎಂ.ಅನುಪ್ರೀತಾ, ಕ್ರೀಡಾ ಮಂತ್ರಿಗಳಾಗಿ ಪ್ರಣವ್ ಪಿ ಗಾವಂಕರ್, ಸಹನಾ ಬಿ ಭಟ್, ಸ್ವಚ್ಛತಾ ಮಂತ್ರಿಗಳಾಗಿ ಜೀವಿತ್ ಎಂ ಬಿಲ್ಲವ, ಶ್ರಾವ್ಯ ಜಿ.ಶೇಟ್,
ಪರಿಸರ ಕ್ಲಬ್ ಮಂತ್ರಿಗಳಾಗಿ ಕುಮಾರ್ ಪ್ರಜ್ವಲ್ ಜೈನ್, ಕುಮಾರಿ ಸಿಂಚನಾ ಶೆಟ್ಟಿ, ಐಟಿ ಕ್ಲಬ್ ಮಂತ್ರಿಗಳಾಗಿ ಕುಮಾರಿ ಸಿಂಚನಾ ಹೆಗಡೆ, ಕುಮಾರ್ ಆದಿತ್ಯ ಶೇಟ್, ಸಾಂಸ್ಕೃತಿಕ ಮಂತ್ರಿಗಳಾಗಿ ಶರತ್ ಮುರುಡೇಶ್ವರ ಅದಿತಿ ಅನಿಲ್ ನಾಯ್ಕ್, ಪ್ರಾರ್ಥನಾ ಮಂತ್ರಿಗಳಾಗಿ ಸಾತ್ವಿಕ್ ಜಿ ಭಟ್ ಸಮೀಕ್ಷಾ ರಾಯ್ಕರ್, ಗ್ರಂಥಾಲಯ ಮಂತ್ರಗಳಾಗಿ ಮಹಮ್ಮದ್ ರಯಾನ್, ದೀಪ್ತಿ ಎಂ ನಾಯ್ಕ್ , ಆರೋಗ್ಯ ಮಂತ್ರಿಗಳಾಗಿ ನಿಧಿಪ್ ಜಿ ಹೆಗಡೆ, ವನ್ಯಾ ಪಿ.ಹೆಗಡೆ, ವಿಜ್ಞಾನ ಕ್ಲಬ್ ಮಂತ್ರಿಗಳಾಗಿ ಪ್ರೀತಮ್ ವೈದ್ಯ, ಪೃಥ್ವಿ ಹೆಗಡೆ, ಪಿಲಾಟಲಿ ಕ್ಲಬ್ ಮಂತ್ರಿಗಳಾಗಿ ಪ್ರಮಥ್ ಎಂ.ಎಚ್ ಮತ್ತು ಶ್ರಾವಣಿ ಮಹಾಲೆ ಆಯ್ಕೆ ಆಗಿದ್ದಾರೆ.