Slide
Slide
Slide
previous arrow
next arrow

ಕೇಶವ ಹೆಗಡೆ ಸಮರ್ಪಣಾ ಭಾವ ಪ್ರೇರಣೆಯಾಗಲಿ: ಸ್ವರ್ಣವಲ್ಲೀ ಶ್ರೀ

300x250 AD

ಶಿರಸಿ: ವಿಶ್ವ ಹಿಂದೂ ಪರಿಷತ್ ಪ್ರಮುಖರಾಗಿದ್ದ ಕೇಶವ ಹೆಗಡೆ ನಮಗೆ ತುಂಬಾ ಆತ್ಮೀಯರಾಗಿದ್ದರು. ಅವರ ಅಗಲಿಕೆಗೆ ದುಃಖವಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ.

ತನ್ನ ಜೀವನವನ್ನೇ ಹಿಂದೂ‌ ಸಂಘಟನೆಗಾಗಿ ಸಮರ್ಪಿಸಿಕೊಂಡು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ಒಬ್ಬ ದೃಢವಾದ ಕಾರ್ಯಕರ್ತ ಕೇಶವ ಹೆಗಡೆ. ನಮಗೆ‌ ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರದಲ್ಲಿಯೂ ಎತ್ತರದ ಮಟ್ಟದ‌‌ ಪ್ರಮುಖರ ಸಂಪರ್ಕ ಆಗಲು‌ ಕೇಶವ ಹೆಗಡೆ ಪ್ರಮುಖ ಕಾರಣೀಕರ್ತರಾಗಿದ್ದರು. ಸಮರ್ಪಣಾ ಭಾವದ ಕೆಲಸಗಾರ ಅವರು. ಅವರು ಸದ್ಗತಿ ಹೊಂದಲಿ. ಅವರ ಸಮರ್ಪಣಾ ಭಾವ ಈಗಿರುವ ನಮಗೆಲ್ಲ ಪ್ರೇರಣೆ ಆಗಲಿ ಎಂದು ಶೋಕ‌ ಸಂದೇಶದಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top