Slide
Slide
Slide
previous arrow
next arrow

ಹೆಗಡೆಕಟ್ಟಾದಲ್ಲಿನ ಗೋಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳಿಂದ ಮನವಿ ಸಲ್ಲಿಕೆ

300x250 AD

ಶಿರಸಿ: ತಾಲೂಕಿನ ಹೆಗಡೆಕಟ್ಟಾ ಬಳಿ ಗೋವನ್ನು ಕಡಿದು ತಲೆ ಭಾಗವನ್ನು ರಸ್ತೆ ಪಕ್ಕ ಎಸೆದಿದ್ದ ಘಟನೆಗೆ ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಖಂಡಿಸಿ ಶನಿವಾರ ಹಿಂದೂ ಜಾಗರಣಾ ವೇದಿಕೆಯ ಶಿರಸಿ ಘಟಕವು ಗ್ರಾಮೀಣ ಪೋಲೀಸ್ ಠಾಣೆಗೆ ಪಿಎಸೈಗೆ ಮನವಿ ಸಲ್ಲಿಸಿದೆ.

ನಮ್ಮ ಎಲ್ಲ ಹಿಂದುಗಳಿಗೆ ಪವಿತ್ರವಾಗಿರುವ, ನಿತ್ಯ ಪೂಜಿಸುವ ಗೋವಿನ ತಲೆಯನ್ನು ಕಡಿದಿರುವುದು ಖಂಡನೀಯ. ಗೋವು ಸಮಸ್ತ ಹಿಂದುಗಳಿಗೆ ಪೂಜನೀಯವಾಗಿದ್ದು, ಮುಕ್ಕೋಟಿ ದೇವರ ಸ್ವರೂಪವಾಗಿ ನಾವು ಗೋವನ್ನು ಪೂಜಿಸುತ್ತೇವೆ ಮತ್ತು ಆದರದಿಂದ ಕಾಣುತ್ತೇವೆ. ದುಷ್ಕರ್ಮಿಗಳು, ಸಮಾಜ ಘಾತುಕರು ಹಿಂದುಗಳ ಪವಿತ್ರ ಗೋವನ್ನು ವಧಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರದಲ್ಲಿದ್ದಾರೆ. ಗೋವು ನಮ್ಮ ಹಿಂದುಗಳ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಹೀಗಿರುವಾಗ ನಮ್ಮ ಹಿಂದು ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕಾರಣದಿಂದಲೇ ದುರುದ್ದೇಶಪೂರಿತವಾಗಿ ಗೋವನ್ನು ಕಡಿಯುವ ಹೀನ ಮನಸ್ಸಿನ ದುರುಳರ ದುಷ್ಕೃತ್ಯವನ್ನು ಸಹಿಸಲಸಾಧ್ಯ. ಈ ಕೂಡಲೇ ಪೋಲೀಸ್ ಇಲಾಖೆ ತೀವ್ರತರವಾಗಿ ಅಗತ್ಯ ಕ್ರಮ ವಹಿಸಿ, ಈ ದುಷ್ಕೃತ್ಯದಲ್ಲಿ ಭಾಗಿಯಾದ ಆಪರಾಧಿಗಳನ್ನು ಬಂಧಿಸಬೇಕು. ಮತ್ತು ಮುಂದೆ ಎಲ್ಲಿಯೂ ಇಂತಹ ದುರ್ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗು ರಾಜ್ಯ ಸರಕಾರಗಳು ಇಂತಹ ಸಮಾಜ ಘಾತುಕ ದುಷ್ಟಶಕ್ತಿಗಳನ್ನು ಹತ್ತಿಕ್ಕಬೇಕು ಎಂದು ಸಮಸ್ತ ಹಿಂದೂ ಸಮಾಜದ ಸಂಘಟನೆಗಳ ಪರವಾಗಿ ಹಿಂದೂ ಜಾಗರಣಾ ವೇದಿಕೆ ಶಿರಸಿ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಹಿಂದೂ ಜಾಗರಣ ವೇದಿಕೆ ಶಿರಸಿ ಸಂಚಾಲಕ ಹರೀಶ ಕರ್ಕಿ, ಸಂಘಟನೆಯ ಸತೀಶ ನಾಯ್ಕ, ನಂದನ ಸಾಗರ, ಕಿರಣ ದಾವಣಗೆರೆ, ಮಂಜು ಪಡ್ಡಿ, ಹರೀಶ ಪಟಗಾರ್, ದಿನೇಶ ಮೊಗೇರ್, ಕಮಲಾಕರ ಹನೇಹಳ್ಳಿ, ಭಜರಂಗದಳದ ಅಮಿತ್ ಶೇಟ್ ಸೇರಿದಂತೆ ಇನ್ನಿತರರು ಇದ್ದರು.

300x250 AD

Share This
300x250 AD
300x250 AD
300x250 AD
Back to top