• Slide
    Slide
    Slide
    previous arrow
    next arrow
  • ಜು.3ಕ್ಕೆ ‘ಕದಂಬ ಸಸ್ಯ ಸಂತೆ’ ಉದ್ಘಾಟನೆ

    300x250 AD

    ಶಿರಸಿ: ರೈತರಿಗೆ ವಿವಿಧ ಜಾತಿಯ ಉತ್ತಮ ಗುಣಮಟ್ಟದ ಗಿಡಗಳನ್ನು ಒದಗಿಸುವ ಉದ್ದೇಶದಿಂದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು  ಕದಂಬ ಸಸ್ಯ ಸಂತೆಯನ್ನು ಪ್ರಾರಂಭಿಸಲಿದೆ. ಸಂಸ್ಥೆಯ ಆವಾರದಲ್ಲಿ ಜು.3, ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ  ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಸಸ್ಯಸಂತೆಯನ್ನು ಉದ್ಘಾಟಿಸಲಿದ್ದಾರೆ.  

    ಕದಂಬ ಸಸ್ಯ ಸಂತೆಯು ಜೈವಿಕ ಇಂಧನ ಗಿಡಗಳನ್ನು ಆಸಕ್ತ ರೈತರಿಗೆ ಒದಗಿಸುವುದರ ಮೂಲಕ ಪರ‍್ಯಾಯ ಇಂಧನದ ಗಿಡಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸುವುದು, ಸ್ಥಳೀಯ ರೈತರ ಮನೆಗಳಲ್ಲಿರುವ ವಿಶೇಷ ತಳಿಯ ವಿವಿಧ ಜಾತಿಯ ಗಿಡಗಳನ್ನು ಪ್ರಚುರಪಡಿಸುವದು, ಮೌಲ್ಯವರ್ಧನೆಗೆ ಯೋಗ್ಯವಾದ ವಿಶೇಷ ತಳಿಯ ಹಲಸಿನ ಗಿಡಗಳ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ಹೊಂದಿದೆ.

    300x250 AD

    ಸತತ ಹನ್ನೆರಡು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಸಸ್ಯಸಂತೆಯಲ್ಲಿ ಉತ್ತಮ ಗುಣಮಟ್ಟದ ಜಾಯಿಕಾಯಿ,  ಲವಂಗ,  ಗೇರು, ಮಾವು, ನೆಲ್ಲಿ, ಕಾಳುಮೆಣಸು, ಕೊಕ್ಕೊ, ಕಾಫಿ, ಅಪ್ಪೆ ಮಾವು, ಹಲಸು ಮುಂತಾದ ಗಿಡಗಳು ದೊರೆಯುತ್ತವೆ ಹಾಗೂ ರೈತರು ತಮ್ಮಲ್ಲಿರುವ ಯಾವುದೇ ಉತ್ತಮ ಗಿಡಗಳನ್ನು ಮಾರಾಟಕ್ಕೆ ತರಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಲು ಕೋರಿದೆ. (ದೂ:tel:+9108384233163/ tel:+919480622572).

    Share This
    300x250 AD
    300x250 AD
    300x250 AD
    Leaderboard Ad
    Back to top