Slide
Slide
Slide
previous arrow
next arrow

ಯಶಸ್ವಿಯಾಗಿ ನಡೆದ ಉತ್ತರಕನ್ನಡ ಜಿಲ್ಲೆಯ ಕೃತಕ ಗರ್ಭಧಾರಣಾ ತಂತ್ರಜ್ಞರ ಸಭೆ

300x250 AD

ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರಕನ್ನಡ ಜಿಲ್ಲೆಯ ಕೃತಕ ಗರ್ಭಧಾರಣಾ ತಂತ್ರಜ್ಞರ ಕುಂದುಕೊರತೆಗಳನ್ನು ಹಾಗೂ ಇನಾಫ್‌ (INAPH) ತಂತ್ರಾಂಶದಲ್ಲಿ ಉಂಟಾಗುತ್ತಿದ್ದ ಕೆಲ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅಧ್ಯಕ್ಷತೆಯಲ್ಲಿ ನಗರದ ಮಧುವನ ಹೋಟೆಲ್‌ ಹಾಲ್‌ನಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಜಿಲ್ಲೆಯಲ್ಲಿನ ಕೃತಕ ಗರ್ಭಧಾರಣಾ ತಂತ್ರಜ್ಞರು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೃತಕ ಗರ್ಭಧಾರಣೆಯ ಮಾಹಿತಿಯನ್ನು (INAPH) ತಂತ್ರಾಂಶದಲ್ಲಿ ಅಳವಡಿಸುವುದು ಕಡ್ಡಾಯವಾಗಿದ್ದು, (INAPH) ತಂತ್ರಾಂಶದಲ್ಲಿ ಮಾಹಿತಿಯನ್ನು ಅಳವಡಿಸುವಾಗ ಎದುರಾಗುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ತಾವುಗಳು ನನ್ನ ಗಮನಕ್ಕೆ ಈಗಾಗಲೇ ತಂದಿರುವ ಕಾರಣ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಆರೋಗ್ಯಕರ ಚರ್ಚೆಯ ಮೂಲಕ ನಾವು ತಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದ್ದು ಆದಷ್ಟು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದಂತೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದ್ದು, ತಾವುಗಳು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸಾತ್ವಿಕವಾದ ಹಾಗೂ ತಾತ್ವಿಕವಾದ ಪರಿಹಾರವನ್ನು ಒದಗಿಸುವ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.

ಕೃತಕ ಗರ್ಭಧಾರಣಾ ತಂತ್ರಜ್ಞರ ಪರವಾಗಿ ಹುಣಸೇಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಕೃತಕ ಗರ್ಭಧಾರಣಾ ತಂತ್ರಜ್ಞರಾದ ನರಸಿಂಹ ಎನ್‌. ಹೆಗಡೆ ಮಾತನಾಡಿ (INAPH) ತಂತ್ರಾಂಶದಲ್ಲಿ ಕೇವಲ 20 ಗ್ರಾಮಗಳನ್ನು ಮಾತ್ರ ಆಯ್ಕೆ ಮಾಡಿ ನಾವು ಆಯ್ಕೆ ಮಾಡಿದ 20 ಗ್ರಾಮಗಳಲ್ಲಿ ಮಾತ್ರ ಕೃತಕ ಗರ್ಭಧಾರಣಾ ಮಾಹಿತಿಯನ್ನು ಅಳವಡಿಸಲು ಅವಕಾಶವಿದ್ದು ಇದರಿಂದ ನಾವು 20 ಕ್ಕಿಂತಲೂ ಹೆಚ್ಚಿನ ಗ್ರಾಮಗಳಿಗೆ ತೆರಳಿ ಕೃತಕ ಗರ್ಭಧಾರಣಾ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ತಾವು ನಮೂದಿಸಿದ ಮಾಹಿತಿಯನ್ನು ಅನ್ಯ ವ್ಯಕ್ತಿಗಳು (INAPH) ತಂತ್ರಾಂಶದಲ್ಲಿ ಬದಲಾವಣೆ ಮಾಡುತ್ತಿದ್ದು ಇದರಿಂದ ತೊಂದರೆ ಉಂಟಾಗುತ್ತಿದೆ, ಹಾಗೆಯೇ ಜಾನುವಾರುಗಳಿಗೆ ಅಳವಡಿಸುವ ಕಿವಿ ಒಲೆಯು ಜಾನುವಾರುಗಳ ಕಿವಿಯಿಂದ ಉದುರಿ ಹೋಗುತ್ತಿದ್ದು ತಾವುಗಳು ನೀಡುತ್ತಿರುವ ಕಿವಿ ಒಲೆಯ ಗುಣಮಟ್ಟವನ್ನು ಇನ್ನೂ ಉತ್ತಮಗೊಳಿಸಬೇಕಿದೆ. (INAPH) ತಂತ್ರಾಂಶದಲ್ಲಿ ಲಭ್ಯವಿರುವ ಎಲ್ಲಾ ಆಯ್ಕೆಗಳ ಬಗ್ಗೆ ನಮಗೆ ಇನ್ನೂ ಹೆಚ್ಚಿನ ಮಾಹಿತಿಯ ಅವಶ್ಯಕವಿದ್ದು ಈ ಬಗ್ಗೆ ಸೂಕ್ತ ಮಾಹಿತಿಯನ್ನು ತಾವುಗಳು ನೀಡಬೇಕು, ನಮಗೆ ನೀಡಲಾಗುವ ಪ್ರೋತ್ಸಾಹಧನದ ಮಾಹಿತಿ ಸರಿಯಾದ ವೇಳೆಯಲ್ಲಿ ನಮಗೆ ಲಭ್ಯವಾಗುತ್ತಿಲ್ಲ, ಒಂದೇ ಗ್ರಾಮದಲ್ಲಿ ಅನೇಕ ತಂತ್ರಜ್ಞರು ಕೃತಕ ಗರ್ಭಧಾರಣಾ ಕಾರ್ಯವನ್ನು ಕೈಗೊಳ್ಳುತ್ತಿದ್ದು ಈ ಬಗ್ಗೆ (INAPH) ತಂತ್ರಾಂಶದಲ್ಲಿ ಹೇಗೆ ಮಾಹಿತಿಯನ್ನು ನಮೂದಿಸಬೇಕೆಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಇನ್ನಿತರ ಕೃತಕ ಗರ್ಭಧಾರಣಾ ತಂತ್ರಜ್ಞರು ತಾವುಗಳು ಎದುರಿಸುತ್ತುರವ ಸಮಸ್ಯೆಗಳನ್ನು ಸಭೆಗೆ ತಿಳಿಸಿದರು.

300x250 AD

ಕೃತಕ ಗರ್ಭಧಾರಣಾ ತಂತ್ರಜ್ಞರ ಸಮಸ್ಯೆಗಳಿಗೆ ಸ್ಪಂದಿಸಿ ಮಾತನಾಡಿದ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ರಾಕೇಶ ಬಾಂಗ್ಲೆ, ಒಬ್ಬ ಕೃತಕ ಗರ್ಭಧಾರಣಾ ತಂತ್ರಜ್ಞ 20 ಕ್ಕಿಂತಲೂ ಹೆಚ್ಚಿನ ಗ್ರಾಮಗಳಿಗೆ ತೆರಳಿ ಕೃತಕ ಗರ್ಭಧಾರಣಾ ಕಾರ್ಯವನ್ನು ಕೈಗೊಂಡಿದ್ದರೆ ಅಂತಹ ತಂತ್ರಜ್ಞರಿಗೆ ಎರಡು ಅಥವಾ ಹೆಚ್ಚಿನ ಲಾಗಿನ್‌ ಐಡಿಯನ್ನು ನೀಡಲಾಗುವುದು. ಕಿವಿ ಒಲೆಯನ್ನು ಸರಿಯಾದ ರೀತಿಯಲ್ಲಿ ಜಾನುವಾರುಗಳಿಗೆ ಲಗತ್ತಿಸಿದರೆ ಅವುಗಳು ಜಾನುವಾರುಗಳ ಕಿವಿಯಿಂದ ಬೇರ್ಪಡುವ ಸಾಧ್ಯತೆ ಕಡಿಮೆ ಇರುತ್ತದೆ ಎಂದರು. (INAPH) ತಂತ್ರಾಂಶದಲ್ಲಿ ಇರುವ ಅನೇಕ ಆಯ್ಕೆಗಳನ್ನು ಹೇಗೆ ಬಳಸಬೇಕೆಂದು ಅವರು ಮಾಹಿತಿ ನೀಡಿದರು. ಕೃತಕ ಗರ್ಭಧಾರಣಾ ತಂತ್ರಜ್ಞರಿಗೆ ಕಾಲಕಾಲಕ್ಕೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುತ್ತಿದ್ದು ಈಗಾಗಲೇ ಪ್ರೋತ್ಸಾಹಧನ ಜಮಾ ಆಗಿರುವ ಬಗ್ಗೆ ಮಾಹಿತಿ ನೀಡಿದರು. ಇನ್ನು ಮುಂದೆ ಕಾಲಕಾಲಕ್ಕೆ ಸರಿಯಾಗಿ ತಮಗೆಲ್ಲರಿಗೂ ವಾಟ್ಸ್ಯಾಪ್‌ ಗ್ರೂಪ್‌ ಮೂಲಕ ಮಾಹಿತಿ ನೀಡಲಾಗುವುದು ಎಂದರು. ಅಂತೆಯೇ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಯಲ್ಲಾಪುರದ ನೊಡೆಲ್‌ ಅಧಿಕಾರಿಗಳಾದ ಡಾ. ಶ್ರೀನಿವಾಸ ಪಾಟೀಲ್‌ (INAPH) ತಂತ್ರಾಂಶದ ಬಗ್ಗೆ ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ಕೃತಕ ಗರ್ಭಧಾರಣಾ ತಂತ್ರಜ್ಞರಿಗೆ ನೀಡಿದರು. ಯಾವುದೇ ರೀತಿಯ ಸಮಸ್ಯೆಗಳನ್ನು ಕಂಡುಬಂದಲ್ಲಿ ತಮ್ಮನ್ನು ಕೂಡಲೇ ಸಂಪರ್ಕಿಸುವಂತೆ ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಕರುಗಳಾದ ಶಂಕರ ಪರಮೇಶ್ವರ ಹೆಗಡೆ, ಪರಶುರಾಮ ವೀರಭದ್ರ ನಾಯ್ಕ, ಜಂಟೀ ನಿರ್ದೇಶಕರಾದ ಡಾ. ವೀರೇಶ ತರಲಿ, ಸಹಾಯಕ ನಿರ್ದೇಶಕರು ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಡಾ. ಗಜಾನನ ಹೊಸ್ಮನಿ, ಉತ್ತರಕನ್ನಡ ಜಿಲ್ಲಾ ಮುಖ್ಯಸ್ಥರಾದ ಎಸ್‌ ಎಸ್‌ ಬಿಜೂರ್‌, ಒಕ್ಕೂಟದ ವಿಸ್ತರಣಾಧಿಕಾರಿಗಳು, ವಿಸ್ತರಣಾ ಸಮಾಲೋಚಕರು ಹಾಗೂ ಸಿಬ್ಬಂಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top