ದಾಂಡೇಲಿ: ನಗರದಲ್ಲಿರುವ ತಹಶೀಲ್ದಾರ್ ಕರ‍್ಯಾಲಯದಲ್ಲಿ ನಾಡಪ್ರಭು ಕೆಂಪೇಗೌಡರ ಜನ್ಮಜಯಂತಿ ಕರ‍್ಯಕ್ರಮವನ್ನು ಆಚರಿಸಲಾಯಿತು.
ಕರ‍್ಯಕ್ರಮದ ಆರಂಭದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಆರತಿ ಬೆಳಗಿ ಪೂಜೆಯನ್ನು ಸಲ್ಲಿಸಲಾಯ್ತು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರು ಕೆಂಪೇಗೌಡರವರು ನಾಡಿನ ಶ್ರೇಷ್ಟ ಆಡಳಿತಗಾರ ಮಾತ್ರವಲ್ಲದೇ ನಾಡಿನ ಅಭಿಬೃದ್ಧಿಗಾಗಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗೆ ಹೊಸ ಆಯಾಮವನ್ನು ತಂದುಕೊಟ್ಟ ವ್ಯಕ್ತಿಯಾಗಿದ್ದಾರೆ. ಅವರ ಆದರ್ಶಗಳು, ಸಾಮಾಜಿಕವಾದ ಬದುಕು ನಮಗೆಲ್ಲರಿಗೂ ಸದಾ ಸ್ಫೂರ್ತಿ ಎಂದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿ, ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್, ಆಹಾರ ನಿರೀಕ್ಷಕ ಗೋಪಿ ಚೌವ್ಹಾಣ್, ತಹಶೀಲ್ದಾರ್ ಕಚೇರಿಯ ದೀಪಾಲಿ ಪೆಡ್ನೇಕರ್, ಗೌಡಪ್ಪ ಬನಕದಿನ್ನಿ, ಮುಕುಂದ್, ದಯಾನಂದ ಚಿಟ್ಟಿ, ರವಿ ಕಮ್ಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.