Slide
Slide
Slide
previous arrow
next arrow

ಕಾರವಾರ ರೋಟರಿ ಕ್ಲಬ್‌: ನೂತನ ಅಧ್ಯಕ್ಷರಾಗಿ ಡಾ. ಸಮೀರಕುಮಾರ ಆಯ್ಕೆ

300x250 AD

ಕಾರವಾರ: ಜಿಲ್ಲೆಯ ಅತಿ ಹಳೆಯ ರೋಟರಿ ಸಂಸ್ಥೆಗಳಲ್ಲಿ ಒಂದಾದ ಕಾರವಾರ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ದಂತ ವೈದ್ಯ ಡಾ.ಸಮೀರಕುಮಾರ ಟಿ.ನಾಯಕ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಗುರುರಾಜ್ ವಿ.ಭಟ್ ಹಾಗೂ ಖಜಾಂಚಿಯಾಗಿ ಅಮರನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಡಾ.ಸಮೀರಕುಮಾರ ನಾಯಕ ಕಳೆದ 14 ವಷÀðದಿಂದ ಶಾಂತಿ ದಂತ ಚಿಕಿತ್ಸಾಲಯ ಮತ್ತು ಇಪ್ಲ್ಯಾಂಟ್ ಸೆಂಟರ್ ನಡೆಸುತ್ತಿದ್ದಾರೆ. ಕಾರವಾರ ನಾಡವರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಕಾರ್ಯದರ್ಶಿಯಾಗಿ ಆಯ್ಕೆಯಾದ ಗುರುರಾಜ್ ವಿ.ಭಟ್ ರವರು ಫೆಡರಲ್ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದಾರೆ. ಕಳೆದ 13 ವರ್ಷಗಳಿಂದ ಇವರು ಕಾರ್ಕಳ, ತಿಪಟೂರು, ಕಾರವಾರ ರೋಟರಿ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಖಜಾಂಚಿ ಅಮರನಾಥ ಶೆಟ್ಟಿ ಕಾರವಾರದ ಚಿರಪರಿಚಿತ ಉದ್ಯಮಿಯಾಗಿದ್ದು, ಗಂಗಾ ಆಟೋಮೋಬೈಲ್ಸ್ನ ಮಾಲೀಕರಗಿದ್ದಾರೆ. ಇವರ ಅವಧಿಯಲ್ಲಿ ಕಾರವಾರ ರೋಟರಿ ಕ್ಲಬ್ ಹೆಚ್ಚಿನ ಸಮಾಜ ಸೇವೆ ಕೆಲಸಗಳನ್ನು ಮಾಡಲಿ ಎಂದು ಸದಸ್ಯರು ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top