ಹೊನ್ನಾವರ: ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ತಾಲೂಕಿನ ನೀಲಗೋಡ ಯಕ್ಷೀ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು.
ಶ್ರೀಗಳನ್ನು ಪೂರ್ಣಕುಂಭ ಸ್ವಾಗತ ಚಂಡೆ ವಾದನದ ಮೂಲಕ ಸ್ವಾಗತಿಸಲಾಯಿತು. ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಮತ್ತು ಭಕ್ತರ ಒಳತಿಗಾಗಿ ನಡೆಯುವ ನವಚಂಡಿಕಾ ಯಾಗದ ಪೂರ್ಣಾಹುತಿ ನೆರವೇರಿಸಿದರು. ನಂತರ ಶ್ರೀ ಯಕ್ಷೀ ಚೌಡೇಶ್ವರಿ ದೇವರುಗಳಿಗೆ ಪೂಜೆ ನೇರವೇರಿಸಿದರು ದೇವಾಲಯದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿಯವರು ಗುರುಗಳಿಗೆ ಪಾದಪೂಜೆ ನೆರವೇರಿಸಿದರು.
ಆಶೀರ್ವಚನ ನೀಡಿದ ಶ್ರೀಗಳು, ದೇವಸ್ಥಾನಗಳಲ್ಲಿ ಮಾನಸಿಕ ನೆಮ್ಮದಿ ದೊರೆಯಲಿದೆ. ಭಕ್ತರು ಶೃದ್ದಾಭಕ್ತಿಯಿಂದ ತಮ್ಮ ಸಮಸ್ಯೆ ಹೇಳಿಕೊಂಡರೆ, ಈ ಸ್ಥಳದಲ್ಲಿ ಒಂದು ರೀತಿ ನೆಮ್ಮದಿ ಸಿಗಲಿದೆ. ಈ ದೇವಿಯ ಸನ್ನಿಧಾನದಲ್ಲಿ ನಿರಂತರವಾಗಿ ಅನೇಕ ಬಗೆಯ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ನಾಡಿನೆಲ್ಲಡೆಯಿಂದ ಭಕ್ತರು ಆಗಮಿಸುವ ಈ ಕ್ಷೇತ್ರ ಇನ್ನಷ್ಟು ಪ್ರಸಿದ್ದವಾಗಲಿ. ಭಕ್ತರ ಬಯಕೆ ಈಡೇರುವ ಮೂಲಕ ಸಕಲ ಇಷ್ಟಾರ್ಥಗಳು ನೆರವೇರಲಿ ಎಂದು ಆಶೀರ್ವದಿಸಿದರು.