ದಾಂಡೇಲಿ: ನಗರದ ಬಂಗೂರನಗರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ರಚನೆ ಕುರಿತಂತೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಲ್.ಗುಂಡೂರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಹಳೆ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾಗಿ ನಗರದ ಗ್ರೀನ್ ಅಂಬ್ರೆಲ್ಲಾ ಇಕೋ ಕ್ಲಬಿನ ಅಧ್ಯಕ್ಷರಾದ ರಾಹುಲ್ ಬಾವಾಜಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯ್ತು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನಗರದ ವಕೀಲ ಎಸ್.ಸೋಮಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾಗಿ ನಗರದ ಹಿರಿಯ ಮುಖಂಡರಾದ ವಾಸುದೇವ ಪ್ರಭು, ಕಾರ್ಯಾಧ್ಯಕ್ಷರಾಗಿ ಮಹಾಂತೇಶ್ ಜುಗತಿಮಠ, ಖಜಾಂಚಿಯಾಗಿ ಡಾ.ತೃಪ್ತಿ ನಾಯಕ, ಸಹ ಕರ‍್ಯದರ್ಶಿಯಾಗಿ ರೇಷ್ಮಾ ಕುಮಾರ್ ಕರಗಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಎಲ್.ಗುಂಡೂರ್ ಹಾಗೂ ಹಳೆ ವಿದ್ಯಾರ್ಥಿಗಳಾದ ಡಾ.ಅನಿತಾ ನಾಯರ್, ಇಮಾಮ್ ಸರ್ವರ್, ನವೀನ್ ಕಾಮತ್, ಶಶಿಧರ್ ಕದಂ, ಎಸ್.ಚಂದ್ರಶೇಖರ್, ರಾಜೇಶ್ ವೆರ್ಣೇಕರ್, ಸುನೀಲ್ ಪಡವಳಕರ್ ಮತ್ತು ಶ್ವೇತಾ ಜಾಧವ್ ಅವರನ್ನು ಹಾಗೂ ಲೆಕ್ಕ ಪರಿಶೋಧಕರಾಗಿ ಚಾರ್ಟೆಡ್ ಅಕೌಂಟೆ0ಟ್ ಸಚಿನ್ ಕಾಮತ್ ಅವರನ್ನು ಆಯ್ಕೆ ಡಲಾಯಿತು.