• Slide
    Slide
    Slide
    previous arrow
    next arrow
  • ವಿಎಸ್ಎಸ್ ಉಮ್ಮಚಗಿ ಚುನಾವಣೆ: ಆಯ್ಕೆಗೊಂಡವರ ಮಾಹಿತಿ‌ ಇಲ್ಲಿದೆ

    300x250 AD

    ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದ 2023-24 ರಿಂದ 2027-28 ನೇ ಸಾಲಿನ ನಿರ್ದೇಶಕ ಮಂಡಳಿಯ ಚುನಾವಣೆಯು ಜೂ.24 , ಶನಿವಾರದಂದು ನಡೆದಿದ್ದು, ಹಾಲಿ ಅಧ್ಯಕ್ಷ ಮಹಾಬಲೇಶ್ವರ ಗೋಪಾಲಕೃಷ್ಣ ಭಟ್ ಸಂಕದಗುಂಡಿ ಬಳಗ ಗೆಲುವು ಸಾಧಿಸಿದೆ.

    ಸಾಮಾನ್ಯ ವರ್ಗದಲ್ಲಿ ಗರಿಷ್ಠ ಮತಗಳನ್ನು ಪಡೆದು ಆಯ್ಕೆಯಾದವರ ಪಟ್ಟಿ ಈ ಕೆಳಗಿನಂತಿದೆ:
    ಮಹಾಬಲೇಶ್ವರ ಗೋಪಾಲಕೃಷ್ಣ ಭಟ್ ಸಂಕದಗುಂಡಿ, ಉದಯ ಗೋಪಾಲ ಭಟ್ ತೋಟದ ಕಲ್ಲಳ್ಳಿ, ಕೆ. ಆರ್. ಶ್ರೀಕೃಷ್ಣಮೂರ್ತಿ ಕಾನಗೋಡು, ನಾಗಪತಿ ವಿಘ್ನೇಶ್ವರ ಹೆಗಡೆ ಶೀಗೆಮನೆ, ಮಹಾಬಲೇಶ್ವರ ಪರಮೇಶ್ವರ್ ಹೆಗಡೆ ಚವತ್ತಿ

    300x250 AD

    ಹಾಗೆಯೇ ಪರಿಶಿಷ್ಟ ಪಂಗಡ ಮೀಸಲಿನಿಂದ ನಾರಾಯಣ ನಾಗ್ಯಾ ಸಿದ್ದಿ ತೋಟಗಟ್ಟು, ಪರಿಶಿಷ್ಟ ಜಾತಿ ಮೀಸಲಿನಿಂದ ವಾಸು ಲಿಂಗಪ್ಪ ಭೋವಿ, ಪ್ರವರ್ಗ ‘ಅ’ ಮೀಸಲಿನಿಂದ ಸೀತಾರಾಮ ಶಣ್ಣು ನಾಯ್ಕ, ಪ್ರವರ್ಗ ‘ಬ’ ಮೀಸಲಿನಿಂದ ಕೈತಾನ್ ಬಿ. ಡಿಸೋಜಾ, ಮಹಿಳಾ ಮೀಸಲಿನಲ್ಲಿ ನಯನ ನಾಗರಾಜ ಹೆಗಡೆ, ಸರಸ್ವತಿ ಸುಬ್ರಾಯ ಪಟಗಾರ್ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಅನಂತ ನಾರಾಯಣ ಹೆಗಡೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top