• Slide
    Slide
    Slide
    previous arrow
    next arrow
  • ಹೆಲ್ಮೆಟ್ ಕಳ್ಳನ ಆಟ ಸಿಸಿಟಿವಿಯಲ್ಲಿ ಸೆರೆ

    300x250 AD

    ಶಿರಸಿ: ನಗರದ ಪ್ರತಿಷ್ಠಿತ ಸಂಸ್ಥೆಯೊಂದರ ಶೆಡ್’ನಲ್ಲಿ ನಿಲ್ಲಿಸಿಟ್ಟ ಬೈಕ್’ನಿಂದ ಹೆಲ್ಮೆಟ್ ಕಳ್ಳತನ ಮಾಡಿ, ಸ್ವಲ್ಪ ಸಮಯದ ನಂತರ ತಾನೇ ಅದನ್ನು ಹಿಂತಿರುಗಿಸಿದ ಘಟನೆ ಇತ್ತೀಚೆಗೆ ನಡೆದಿದೆ.

    ಸಂಸ್ಥೆಯ ಎದುರಲ್ಲಿ ನಿಲ್ಲಿಸಿಟ್ಟ ಗ್ರಾಹಕರ, ಸಿಬ್ಬಂದಿಗಳ ಬೈಕ್ ಪರಿಶೀಲಿಸಿದ ನಂತರ ಶೆಡ್’ನಲ್ಲಿ ನಿಲ್ಲಿಸಿಟ್ಟ ಬೈಕ್’ಗೆ ಇದ್ದ ಹೆಲ್ಮೆಟ್ ಕದ್ದುಕೊಂಡು ಹೋಗಿದ್ದಾನೆ. 10 ನಿಮಿಷಗಳ ನಂತರ ಪುನಃ ಬಂದು ಅದೇ ಜಾಗದಲ್ಲಿ ಹೆಲ್ಮೆಟ್ ಇಡುತ್ತಿದ್ದ ವೇಳೆ ಯಾರೋ ಸಾರ್ವಜನಿಕರು ಗಮನಿಸಿ, ವಿಚಾರಿಸಿದಾಗ ಯಾರೋ ಒಬ್ಬ ಹೆಲ್ಮೆಟ್ ಕದಿಯಲು ಪ್ರಯತ್ನಿಸುತ್ತಿದ್ದ. ಅದನ್ನು ತಡೆದು ಇಲ್ಲಿ ವಾಪಾಸ್ ಇಡಲು ಬಂದಿದ್ದೇನೆಂದು ಹೇಳಿದ್ದಾನೆ.

    300x250 AD

    ಸಂಸ್ಥೆಯ ಸಿಸಿಟಿವಿ ಮೂಲಕ ತಾನು ಸಿಕ್ಕಿ ಬೀಳಬಹುದೆಂಬ ಭಯದಲ್ಲಿ ಹೀಗೆ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಹೆಲ್ಮೆಟ್ ಕಳ್ಳನ ಸತ್ಯಾಂಶವೂ ಕೂಡ ಸಿಸಿಟಿವಿ ಮೂಲಕವೇ ಬೆಳಕಿಗೆ ಬಂದಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top