ಅಂಕೋಲಾ: 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ಹಾಗೂ ವಿವಿಧ ಸಂಘಟನೆಯ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ವಿದ್ಯಾರ್ಥಿಗಳಿಗಾಗಿ ಯೋಗ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಶ್ರೀನಾಥ ಜಿ. ಉದ್ಘಾಟಿಸಿದರು ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಸಿಟಿ ಅಧ್ಯಕ್ಷೆ ಜಯಶ್ರೀ ಶೆಟ್ಟಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಪುರಸಭೆಯ ಮಾಜಿ ಅಧ್ಯಕ್ಷಿ ಶಾಂತಲಾ ನಾಡಕರ್ಣಿ, ದಿಗಂಬರ ಕೇಣಿಕರ, ಅಭಯ ಮರಬಳ್ಳಿ, ಸತೀಶ್ ನಾಯ್ಕ, ಜೋಸ್ನಾ ನಾರ್ವೇಕರ ವಹಿಸಿದ್ದರು. ಯೋಗಗುರು ವಿನಾಯಕ ಗುಡಿಗಾರ ಯೋಗದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಯೋಗ ಸಮೀತಿಗೆ ಸಹಕರಿಸುತ್ತಾ ಬಂದಿರುವ ವಿಜಯಲಕ್ಷ್ಮಿ ಕಾಮತ, ವಿ.ಕೆ.ನಾಯರ, ಸ್ಮಿತಾ ರಾಯಚೂರ್ ದಂಪತಿಗಳನ್ನು ಹಾಗೂ ಸ್ವೀಟ್ ಸಾಗರ ಮಾಲಿಕರಾದ ರಮೇಶ ಪರಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಭಾಷಣ ಸ್ಪರ್ಧೆ, ನೃತ್ಯ ಸ್ಪರ್ಧೆ, ಯೋಗ ಸ್ಪರ್ಧೆಯಲ್ಲಿ ಬಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನದ ಜೊತೆಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಪ್ರಶಾಂತ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೇಯಾ ಸಂಗಡಿಗರು ಸ್ವಾಗತ ಗೀತೆ ಹೇಳಿದರು. ದರ್ಶಿನಿ ಶೆಟ್ಟಿ ನಿರೂಪಿಸಿದರು. ಈ ಸಂದರ್ಭದಲ್ಲಿ ರಾಜು ಹರಿಕಂತ್ರ ಕಣಗೀಲ್, ರಾಮಾ ನಾಯ್ಕ, ಸುರೇಶ ನಾಯ್ಕ, ಯೋಗಿತಾ ಶೇಟ್ಟಿ, ರಾದಿಕಾ ಆಚಾರಿ, ಶೋಭಾ ಶೆಟ್ಟಿ, ಲತಾ ನಾಯ್ಕ, ಶ್ರಿನಿವಾಸ ಶೆಟ್ಟಿ,ನಿರುಪಮಾ ಶ್ಯಾಂಸುಂದರ, ಸುಕಾಂತಿ ಆಚಾರಿ, ಶಾರದಾ ಆಚಾರಿ ಮುಂತಾದವರು ಉಪಸ್ಥಿತರಿದ್ದರು.