Slide
Slide
Slide
previous arrow
next arrow

ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಬೆಂಕಿ: ಸಂಪೂರ್ಣ ಬೆಂಕಿಗಾಹುತಿ

300x250 AD

ಅಂಕೋಲಾ: ತಾಲೂಕಿನ ಬಾಳೆಗುಳಿ ವ್ಯಾಪ್ತಿಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದು ಕಾರು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಸಂಭವಿಸಿದೆ. 

 ಮುರ್ಡೇಶ್ವರ ಬಸ್ತಿಮಕ್ಕಿ ನಿವಾಸಿ ನೌಶಾದ್ ಹಾಸಿಂ ಪಟೇಲ್ ಎನ್ನುವವರು, ಗೋವಾದಿಂದ ತನ್ನ ಹೆಂಡತಿ ಮತ್ತು ಮಕ್ಕಳನ್ನು  ಕರೆತರುವ ಸಲುವಾಗಿ , ತನ್ನ ಸಹೋದರ ಈರ್ಷಾದ್ ಅಹ್ಮದ್ ಹಾಸಿಂ ಪಟೇಲ್ ಇವರ ಮಾಲಕತ್ವದ KA 20 -B 4583 ನಂಬರಿನ ಓಮಿನಿ ಕಾರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ದಾರಿ ಮಧ್ಯೆ ಅಂಕೋಲಾದಿಂದ ಕಾರವಾರ ಕಡೆ ಸಾಗುವ ರಾ.ಹೆ 66 ರ  ಬಾಳೆಗುಳಿ ಓವರ್ ಬ್ರಿಜ್ ಹತ್ತಿರ ಈ ಬೆಂಕಿ ಅವಘಡ ಸಂಭವಿಸಿದೆ.

300x250 AD

ವಾಹನ ಚಲಿಸುತ್ತಿರುವಾಗಲೇ ಅದಾವುದೋ ಕಾರಣದಿಂದ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಅಪಾಯದ ಅರಿವರಿತ  ಚಾಲಕ ವಾಹನವನ್ನು ಬದಿಗೆ ನಿಲ್ಲಿಸಿ,ವಾಹನದಿಂದ ಕೆಳಗಿಳಿದು ಬಂದಿದ್ದಾನೆ. ಗ್ಯಾಸ್ ಪಿಟೆಡ್ ವಾಹನವಾಗಿರುವುದರಿಂದ ಬೆಂಕಿಯ ಜ್ವಾಲೆ ಹೆಚ್ಚುತ್ತಾ ಹೋಗಿ, ಕಾರು ಧಗಧಗಿಸಿ ಉರಿಯಲಾರಂಭಿಸಿದೆ. ಸುದ್ದಿ ತಿಳಿದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಹರ ಸಾಹಸ ಪಡುವಂತಾಯಿತು. ಅಗ್ನಿಶಾಮಕ ದಳದ ವಾಹನದಲ್ಲಿದ್ದ ನೀರು ಖಾಲಿಯಾಗಿ, ಹತ್ತಿರದ ಮೋಹನ ಪುರ್ಸು ನಾಯ್ಕ ಇವರ ಮನೆಯ ಬಾವಿಯಿಂದ ನೀರು ಪಡೆದು,ಕಾರ್ಯಚರಣೆ ಮುಂದುವರಿಸಬೇಕಾಯಿತು. ಸ್ಥಳೀಯರು ಸಹಕರಿಸಿದರು.

Share This
300x250 AD
300x250 AD
300x250 AD
Back to top