ಕುಮಟಾ: ಹುಬ್ಬಳ್ಳಿಯ ಶತಾಬ್ದಿ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ 2023 ಸ್ಪರ್ಧೆಯಲ್ಲಿ ಇಲ್ಲಿನ ಪುರಸಭೆ ವ್ಯಾಯಮ ಶಾಲೆ ವಿಧ್ಯಾರ್ಥಿ ರಾಘವೇಂದ್ರ ಗೌಡ 66 ಕೆಜಿ ದೇಹ ತೂಕದ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿಯ ಪದಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿ ಸಾಧನೆಗೈದಿದ್ದಾರೆ.
ಸ್ಕಾಟ್ 195 ಕೆ.ಜಿ, ಬೆಂಚ್ ಪ್ರೆಸ್ 110 ಕೆ.ಜಿ ಹಾಗೂ ಡೆಡ್‌ಲಿಫ್ಟ್ 202.5 ಕೆ.ಜಿ ಸೇರಿ ಒಟ್ಟೂ 507.5 ಕೆ.ಜಿ ಎತ್ತುವದರ ಮೂಲಕ ಬೆಳ್ಳಿಯ ಪದಕ ಪಡೆದು, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಆಗಸ್ಟ್ ನಲ್ಲಿ ಉತ್ತರಾಖಂಡದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ಗೂ ಸಹ ಆಯ್ಕೆಯಾಗಿದ್ದು, ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ರಾಘವೇಂದ್ರ ಗೌಡ ಅಂತರರಾಷ್ಟ್ರೀಯ ಪವರ್ಲಿಫ್ಟಿಂಗ್ ಕ್ರೀಡಾಪಟು ವೆಂಕಟೇಶ ಪ್ರಭು ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತಿದ್ದಾರೆ. ಇವರ ಈ ಸಾಧನೆಗೆ ಕುಮಟಾ ಪುರಸಭಾ ವ್ಯಾಯಾಮ ಶಾಲಾ ತರಬೇತುದಾರರಾದ ಗುರುರಾಜ ಉಪ್ಪಾರ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಅಭಿನಂದನೆಯ ಜೋತೆಗೆ ಮುಂದಿನ ಸ್ವರ್ಧೆಗೆ ಶುಭಹಾರೈಸಿದ್ದಾರೆ.