ಶಿರಸಿ: ಮಾನವ ಸೇವೆಯೇ ಮಾಧವನ ಸೇವೆ.1960ರಲ್ಲಿ ಸತ್ಯಸಾಯಿ ಸೇವಾ ಟ್ರಸ್ಟ್ ಪ್ರಾರಂಭವಾಯಿತು. ಸಾಯಿಬಾಬಾ ಅವರ ನಾಲ್ಕು ತತ್ವಗಳನ್ನು ಅಳವಡಿಸಿಕೊಂಡು ಈ ಟ್ರಸ್ಟ್ ಸಾಗುತ್ತಿದೆ. ಇರುವುದೊಂದೆ ಧರ್ಮ ಅದು ಪ್ರೇಮ, ಇರುವುದೊಂದೆ ಜಾತಿ ಅದು ಮಾನವ ಜಾತಿ, ಇರುವುದೊಂದೆ ಭಾಷೆ ಅದು ಹೃದಯ ಭಾಷೆ, ದೇವರು ಸರ್ವಂತರಯಾಮಿ ಎಂದು ರಾಮದಾಸ್ ಆಚಾರಿ ಹೇಳಿದರು.
ಅವರು ಎಮ್ಎಮ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯುಎಸಿ,ಎನ್.ಸಿ.ಸಿ, ಎನ್.ಎಸ್.ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಇವರ ಸಂಯೋಜನೆಯಲ್ಲಿ ರಾಸಾಯನಶಾಸ್ತ್ರ ವಿಭಾಗ ಮತ್ತು ಸತ್ಯ ಸಾಯಿ ಟ್ರಸ್ಟ್ ಆಯೋಜಿಸಿದ್ದ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣೆ ಎಂಬ ವಿಷಯದ ಕುರಿತು ನಡೆದ ಕಾರ್ಯಗಾರದಲ್ಲಿ ಮಾತನಾಡುತ್ತಿದ್ದರು.
ದಿನನಿತ್ಯ ಜೀವನದಲ್ಲಿ ಆಗುವ ಅನಾಹುತಗಳ ಅರಿವನ್ನು ಈ ಕಾರ್ಯಕ್ರಮದಲ್ಲಿ ತಿಳಿಸಲಾಗುತ್ತದೆ. ಅದರ ಅನುಭವ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು. ವಿಕೋಪದಲ್ಲಿ ಮಾನವ ನಿರ್ಮಿತ ಹಾಗೂ ಪ್ರಕೃತಿ ನಿರ್ಮಿತ ಎಂಬ ಎರಡು ವಿಧಗಳಿವೆ. ಈಗಿನ ಕಾಲದಲ್ಲಿ ನಡೆಯುವ ಅಪಘಾತಗಳಿಂದ ಜನರು ತಮ್ಮನ್ನು ತಾವು ಹಾಗೂ ಇತರರನ್ನು ರಕ್ಷಿಸಿಕೊಳ್ಳಲು ಆಗುತ್ತಿಲ್ಲ. ಇದನ್ನು ನಿರ್ವಹಣೆ ಮಾಡಲು ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಜಗತ್ತಿನಾದ್ಯಂತ ಅನೇಕ ಅವಘಡಗಳು ಸಂಭವಿಸುತ್ತದೆ. ವಿದ್ಯಾರ್ಥಿಗಳು ಇಂತಹ ಸಂದರ್ಭವನ್ನು ಎದುರಿಸಲು ಮಾನಸಿಕವಾಗಿ, ದೈಹಿಕವಾಗಿ ಸನ್ನದ್ಧರಾಗಿರಬೇಕು. ಈ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಾಗಾರ ನಿಮಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ ಎಂದರು.
ಮುಖ್ಯ ತರಬೇತಿದರ ಗೋಪಾಲ ಸಾಯಿ ಲತೂರ್ ಮತ್ತೆ ಲಾಸ್ ಎಂಜೋಲೆಸ್ ನಲ್ಲಿ ನಡೆದ ಭೂಕಂಪದ ಉಧಾಹರಣೆ ನೀಡಿ. ಲಾಸ್ ಎಂಜೋಲೆಸ್ ನಲ್ಲಿ ಕೇವಲ 55 ಮಂದಿ ಸಾವ್ನಪ್ಪಿದರು. ಕಡಿಮೆ ಪ್ರಮಾಣದ ಆಸ್ತಿ ಹಾನಿ ಆಯಿತು. ಇದಕ್ಕೆ ಕಾರಣ ವಿಪತ್ತು ನಿರ್ವಹಣಾ ಮಾಹಿತಿ. ಆದರೆ ಲಾತುರನಲ್ಲಿನ ಜನಗಳಿಗೆ ಮಾಹಿತಿಗಳ ಕೊರತೆ ಇಂದ 10000 ಅಧಿಕ ಪ್ರಾಣ ಹಾನಿ ಹಾಗೂ 200000 ಅಧಿಕ ಆಸ್ತಿ ನಷ್ಟ ಆಯಿತು.ಭೂಕಂಪದಿಂದ ತಪ್ಪಿಸಿ ಕೊಳ್ಳಲು ತ್ರಿಕೋನ ವಿಧಾನವನ್ನು ಅನುಸರಿಸಬೇಕೆಂದು ಹೇಳಿದರು. ಭೂಕಂಪದ ಸಮಯದಲ್ಲಿ ಕಾರು, ಗಟ್ಟಿಯಾದ ವಸ್ತುಗಳ ಪಕ್ಕದಲ್ಲಿ ಕುಳಿತುಕೊಂಡು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕು. ಪ್ರವಾಹವು ಅತಿಯಾದ ಮಳೆ ಹಾಗೂ ಡ್ಯಾಮ್ ಇಂದ ಬಿಡುವ ನೀರಿನಿಂದ ನದಿಗಳ ಅಕ್ಕ ಪಕ್ಕದ ಊರಿನಲ್ಲಿ ಉಂಟಾಗುತ್ತದೆ. ಮಾಹಿತಿ ತಿಳಿಯದವರು ನೀರಿನಲ್ಲಿ ಮುಳುಗುವ ಸಾಧ್ಯತೆ ಹೆಚ್ಚು. ಮಾಹಿತಿ ತಿಳಿದಿದ್ದರೆ ಜೀವವನ್ನು ರಕ್ಷಿಸಿಕೊಳ್ಳುವುದು ಸುಲಭ. ಬೆಂಕಿ ಅವಘಡದಲ್ಲಿ ಗಾಳಿ ವಸ್ತು ತಪಮಾನ ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತದೆ. ಇವುಗಳಲ್ಲಿ ಯಾವುದಾದರು ಒಂದನಾದ್ರೂ ನಿಲ್ಲಿಸಿದರೆ ಬೆಂಕಿ ಅವಘಡಗಳ್ಳನ್ನು ತಡೆಯಬಹದು. ಮನುಷ್ಯರಿಗೆ ಬೆಂಕಿ ಹತ್ತಿದಾಗ ಅವರನ್ನು ಹೇಗೆ ರಕ್ಷಿಸ ಬಹುದು ಎಂಬ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.
ಪ್ರಥಮ ಚಿಕಿತ್ಸೆ ಮಾಡಲು ಅದರ ಬಗ್ಗೆ ಮಾಹಿತಿ ಇರುವವರೇ ಮಾಡಬೇಕು.ಬೆಂಕಿ ಅವಗಡದಲ್ಲಿ ಸಿಲುಕಿಕೊಂಡವರನ್ನು ಚಾದರ ಅಂಗಿಯಂತಹ ಬಟ್ಟೆಗಳನ್ನು ಬಳಸಿ ಸ್ಟ್ರೆಚ್ಚರ್ ಮಾಡಿ ಅವರನ್ನು ಸಾಗಿಸಬೆಕು. ಕೈ ಕಾಲು ಮುರಿದ ವ್ಯಕ್ತಿಗಳನ್ನು ವನ್ ಹ್ಯಾಂಡ್ ಮೆಥಡ್, ಟು ಹ್ಯಾಂಡ್ ಮೆಥಡ್, ಫೋರ್ ಹ್ಯಾಂಡ್ ಮೆಥಡ್ ಗಳ ಮೂಲಕ ಅವರನ್ನು ಆಂಬುಲೆನ್ಸ್ ಅಥವಾ ಅವಗಡದ ಸ್ಥಳದಿಂದ ಸಾಗಿಸಬೇಕು. ಉಸಿರಾಟದ ಸಮಸ್ಯೆ ಇದ್ದ ವ್ಯಕ್ತಿಗಳನ್ನು ಸಿಪಿಆರ್ ಮಾಡುವುದರ ಮೂಲಕ ರಕ್ಷಿಸಬೇಕು ಎಂದು ಟಿ ಎಸ್ ಎಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋ ಸರ್ಜಿಕಲ್ ಡಾಕ್ಟರ್ ಗೌತಮ್ ಶೇಟ್ ಹೇಳಿದರು.
ಕಾರ್ಯಕ್ರಮದಲ್ಲಿ ದಿವಾಕರ್ ಶೆಟ್ಟಿ, ತಿಮ್ಮಯ್ಯ ಮೀರಾಶ್ರೀ, ವೆಂಕಟೇಶ್ ಬಡಿಗರ್ ಉಪಸ್ಥಿತರಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜಿ ಟಿ ಭಟ್ ಸ್ವಾಗತಿಸಿದರು.ಸತೀಶ್ ನಾಯಕ್ ನಿರೂಪಿಸಿ ವಂದಿಸಿದರು.