Slide
Slide
Slide
previous arrow
next arrow

ಮತಾಂತರ ಮತ್ತು ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರ ಸರಿಯಿಲ್ಲ: ಪೇಜಾವರ ಶ್ರೀ

300x250 AD

ಉಡುಪಿ: ಬಿಜೆಪಿ ಸರ್ಕಾರ ಸಮಾಜದಲ್ಲಿದ್ದ ಎರಡು ಗೊಂದಲಗಳನ್ನು ಪರಿಹರಿಸಲು ಮತಾಂತರ ಮತ್ತು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿತ್ತು. ಹೊಸ ಸರ್ಕಾರ ಎರಡು ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಮಾಡಿರುವುದು ಅತ್ಯಂತ ಕಳವಳಕಾರಿ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಅವರು ಸೋಮವಾರ, ಪತ್ರಕರ್ತರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರಕಾರ ಕಾನೂನು ಹಿಂಪಡೆಯುವ ದುಸ್ಸಾಹಸವನ್ನು ಮಾಡಿದೆ. ರಾಜ್ಯದ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡಿ, ತೀರ್ಮಾನ ಅಂತಿಮಗೊಳಿಸಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

300x250 AD

ಮತಾಂತರದಿಂದ ಹಲವಾರು ಕುಟುಂಬಗಳು ಛಿದ್ರವಾದದ್ದನ್ನು ನಾವು ಕಂಡಿದ್ದೆವು. ಗಂಡ ಹೆಂಡತಿ, ತಾಯಿ ಮಕ್ಕಳ ವೈಮನಸ್ಸಿಗೆ ಮತಾಂತರ ಕಾರಣವಾಗಿತ್ತು. ಹೆಣ್ಮಕ್ಕಳು ಹಸು ಕಟ್ಟಿ ಹಾಲು ಮಾರಿ ಜೀವನ ಸಾಗಿಸುತ್ತಿದ್ದರು. ಆದರೆ ಕಳ್ಳ ಕಾಕರು ತಲ್ವಾರು ಝಳಪಿಸಿ ಹಸು ಕದ್ದೊಯ್ಯೋದು ಹೆಚ್ಚಾಯಿತು. ಹಸು ಸಾಕುವ ಮಹಿಳೆಯರಿಗೆ ಆಸರೆ ಇಲ್ಲದಂತಾಗುತ್ತಿತ್ತು. ಇಂತಹ ಸಮಸ್ಯೆಯನ್ನು ಗಮನಿಸಿ ಹಿಂದಿನ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತು. ಈಗ ಅದನ್ನು ವಾಪಾಸು ಪಡೆಯುವ ಸರಕಾರದ ನಿರ್ಧಾರ ಸರಿಯಲ್ಲ ಎಂದು ದೂರಿದರು.

Share This
300x250 AD
300x250 AD
300x250 AD
Back to top