Slide
Slide
Slide
previous arrow
next arrow

ಕಾಶ್ಮೀರಿ ಪಂಡಿತರ ನರಮೇಧ ನಿರ್ಲಕ್ಷ್ಯ: ಭಾರತದಾದ್ಯಂತ ’ಕಾಶ್ಮೀರ ಪ್ಯಾಟರ್ನ್’ ಪ್ರಾರಂಭ: ರಾಹುಲ ಕೌಲ್

300x250 AD

ಗೋವಾ: ಯಾವುದೇ ಸರಕಾರವೂ ಕಾಶ್ಮೀರಿ ಪಂಡಿತರ ನರಮೇಧವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಇದರ ಪರಿಣಾಮವಾಗಿ ಬಂಗಾಲ ಸೇರಿದಂತೆ ಭಾರತದಲ್ಲಿ ಎಲ್ಲೆಲ್ಲಿ ಮುಸ್ಲಿಂ ಬಹುಸಂಖ್ಯಾತವಿದೆಯೋ ಅಲ್ಲಲ್ಲಿ ’ಕಾಶ್ಮೀರ ಪ್ಯಾಟರ್ನ್’ ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ, ಇಂದು ಅನೇಕ ಸ್ಥಳಗಳಿಂದ ಹಿಂದೂಗಳು ಪಲಾಯನಗೈಯುತ್ತಿದ್ದಾರೆ, ಎಂದು ’ಯೂಥ್ ಫಾರ್ ಪನೂನ್ ಕಾಶ್ಮೀರ್’ ಅಧ್ಯಕ್ಷ ರಾಹುಲ್ ಕೌಲ್ ಸ್ಪಷ್ಟವಾಗಿ ಹೇಳಿದರು. ಅವರು ’ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ’ಕಾಶ್ಮೀರಿ ಪಂಡಿತರ ನರಮೇಧ ನಿರಾಕರಿಸಿದ್ದರಿಂದ ದೇಶದ ಮೇಲಾಗುವ ಪರಿಣಾಮ !’ ಈ ಕುರಿತು ಮಾತನಾಡುತ್ತಿದ್ದರು. ಈ ಸಮಯದಲ್ಲಿ ವೇದಿಕೆಯ ಮೇಲೆ ಕರ್ನಾಟಕದ ಉದ್ಯಮಿ ಪ್ರಶಾಂತ ಸಂಬರಗಿ, ’ಸಂಯುಕ್ತ ಭಾರತೀಯ ಧರ್ಮಸಂಸತ್ತಿ”ನ ರಾಷ್ಟ್ರೀಯ ಅಧ್ಯಕ್ಷ ಆಚಾರ್ಯ ರಾಜೇಶ್ವರ ಮತ್ತು ’ರಾಷ್ಟ್ರ ಧರ್ಮ ಸಂಘಟನೆ’ ಅಧ್ಯಕ್ಷ ಸಂತೋಷ ಕೆಂಚಂಬಾ ಉಪಸ್ಥಿತರಿದ್ದರು.

ಕೌಲ್ ತಮ್ಮ ಮಾತನ್ನು ಮುಂದುವರೆಸುತ್ತಾ, ಎಲ್ಲಿಯವರೆಗೆ ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನರಮೇಧ ಎಂದು ಪರಿಗಣಿಸುವುದಿಲ್ಲವೋ ಅಲ್ಲಿಯವರೆಗೆ ಕಾಶ್ಮೀರಿ ಹಿಂದೂಗಳ ಪುನರ್ವಸತಿ ಸಾಧ್ಯವಿಲ್ಲ. ಇದು ಕೇವಲ ಕಾಶ್ಮೀರಿ ಹಿಂದೂಗಳ ಪುನರ್ವಸತಿಯ ವಿಷಯವಾಗಿರದೇ ದೇಶದ 60 ಕ್ಕೂ ಹೆಚ್ಚು ಕಡೆಗಳಲ್ಲಿ ’ಕಾಶ್ಮೀರಿ ಪ್ಯಾಟರ್ನ್’ಯನ್ನು ಬಳಸಿ ಇಸ್ಲಾಮಿಕ್ ಜಿಹಾದಿಗಳು ತಲೆ ಎತ್ತುತ್ತಿದ್ದಾರೆ, ಅಲ್ಲಿನ ಹಿಂದೂಗಳ ರಕ್ಷಣೆಯ ವಿಷಯವಾಗಿದೆ. ಯಾವ ಕಾಶ್ಮೀರವು ಭಾರತಕ್ಕೆ ಭರತಮುನಿಯನ್ನು ನೀಡಿತೋ ಆ ಕಾಶ್ಮೀರ ಇಂದು ಹಿಂದು ಇಲ್ಲದಂತಾಗಿದೆ. ಪ್ರಸ್ತುತ ಕಾಶ್ಮೀರದಲ್ಲಿ ಶೇಕಡಾ 99 ರಷ್ಟು ಮುಸ್ಲಿಮರು ಜಿಹಾದಿ ವಿಚಾರದವರಾಗಿದ್ದಾರೆ. ಕಾಶ್ಮೀರಿ ಪಂಡಿತರ ಮೇಲಿನ ದಾಳಿಯು ಭಾರತದ ಸಂಸ್ಕೃತಿಯನ್ನು ನಾಶ ಮಾಡುವ ಸಂಚಾಗಿದೆ. ಕಳೆದ ಒಂದು ಸಾವಿರ ವರ್ಷಗಳಿಂದ ಕಾಶ್ಮೀರಿ ಪಂಡಿತರ ಮೇಲೆ ಇಸ್ಲಾಮಿ ದಾಳಿ ನಡೆಸುತ್ತಿದೆ. 1990 ರಲ್ಲಿ ಕಾಶ್ಮೀರಿ ಪಂಡಿತರ ಪಲಾಯನವು ಕಾಶ್ಮೀರದ ಇತಿಹಾಸದಲ್ಲಿ 7 ನೇ ಪಲಾಯನವಾಗಿತ್ತು; ಆದರೆ ಪ್ರತಿ ಬಾರಿಯೂ ಅದೇ ದೃಢಸಂಕಲ್ಪದಿಂದ ಕಾಶ್ಮೀರಕ್ಕೆ ಮರಳಿದ್ದರು. ಇಂದು ಅಲ್ಲಿ 370 ನೇ ವಿಧಿಯನ್ನು ತೆಗೆದುಹಾಕಿದರೂ, ಕಾಶ್ಮೀರವು ಹಿಂದೂಗಳಿಗೆ ಇನ್ನೂ ಸುರಕ್ಷಿತವಾಗಿಲ್ಲ ಇದು ವಸ್ತುಸ್ಥಿತಿಯಾಗಿದೆ. ಕಾಶ್ಮೀರಿ ಪಂಡಿತರ ನರಮೇಧವನ್ನು ಒಪ್ಪಿಕೊಳ್ಳದಿದ್ದರೆ ಅದರ ಪ್ರತಿಬಿಂಬ ಭಾರತದೆಲ್ಲೆಡೆ ಕಾಣಲಿದೆ ಎಂದು ಕೌಲ್ ಹೇಳಿದರು.
ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ http://Hindujagruti.org ಮೂಲಕ ಮತ್ತು ಯೂಟ್ಯೂಬ್ ಚಾನೆಲ್ Hindujagruti ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ.

300x250 AD
Share This
300x250 AD
300x250 AD
300x250 AD
Back to top