• Slide
    Slide
    Slide
    previous arrow
    next arrow
  • ದೇಶಕ್ಕಾಗಿ ಕೊಡುಗೆ ನೀಡುವ ಸದ್ಭಾವನೆ ಬೆಳೆಸಿಕೊಳ್ಳಿ: ಸು.ರಾಮಣ್ಣ

    300x250 AD

    ಕುಮಟಾ: ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್‌ಕೆ ಪ್ರೌಢಶಾಲೆಯ ಹತ್ತನೇ ವರ್ಗದ ರ‍್ಯಾಂಕ್ ವಿಜೇತರಿಗೆ ಹಾಗೂ ಬಿ.ಕೆ.ಭಂಡಾರಕರ‍್ಸ್ ಸರಸ್ವತಿ ಪಿ.ಯು ಕಾಲೇಜಿನ ದ್ವಿತೀಯ ವರ್ಷದ ರ‍್ಯಾಂಕ್ ವಿದ್ಯಾರ್ಥಿಗಳಿಗೆ ಮತ್ತು ಅದಕ್ಕೆ ಕಾರಣೀಭೂತರಾದ ಗುರುವೃಂದದವರಿಗೆ ಸತ್ಕಾರ ಹಾಗೂ ಪುರಸ್ಕಾರ ಕಾರ್ಯಕ್ರಮವಾದ ಅಭಿಪ್ರೇರಣಾ ಮಹೋತ್ಸವವನ್ನು ಆರ್‌ಎಸ್‌ಎಸ್ ಹಿರಿಯ ಪ್ರಚಾರಕರಾದ ಸು.ರಾಮಣ್ಣ ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು, ಬದುಕಿರುವವರೆಗೂ ಕಲಿಯುತ್ತಿರಬೇಕು. ದೇಶಕಟ್ಟುವ ಕಾಯಕದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಭಾರತ ವಿಶ್ವಗುರುವಾಗಬೇಕು. ಜಗತ್ತು ಭಾರತಕ್ಕೆ ತಲೆಬಾಗಿ ಜೈ ಎನ್ನಬೇಕು. ಅಂತಹ ಭವ್ಯ ನಾಡನ್ನು ಕಟ್ಟುವ ಪರಂಪರೆಯನ್ನು ಉಳಿಸುವ ನಾಗರಿಕರಾಗಿ ಎಂದು ಮಕ್ಕಳಿಗೆ ತಿಳಿಹೇಳಿದರು. ದೇಶ ನಮಗೆ ಬೇಕಾದಷ್ಟನ್ನು ನೀಡಿದೆ, ಪ್ರತಿಯಾಗಿ ನಾವೂ ಸಹ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಸದ್ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

    ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 110ನೇ ರ‍್ಯಾಂಕ್ ಪಡೆದ ಕುಮಟಾದ ಹೆಗಡೆ ಮೂಲದ ನಿಧಿ ಪೈ ಗೌರವ ಸ್ವೀಕರಿಸಿ ಮಾತನಾಡಿ, ಮುಂದಿನ ಭವಿಷ್ಯಕ್ಕೆ ಇಂದೇ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಅಂಕ ಗಳಿಸುವುದಷ್ಟೇ ಮುಖ್ಯವಲ್ಲ. ನಿಮಗಿಷ್ಟವಾದ ವಿಷಯವನ್ನು ಆಯ್ದುಕೊಂಡು ಆಸಕ್ತಿಯಿಂದ ಓದಿದರೆ ಯಶಸ್ಸು ಸಾಧ್ಯ. ಅಂತರ್ಜಾಲದಲ್ಲಿ ಲಭ್ಯವಿರುವ ನಮಗೆ ಬೇಕಾದ ಮಾಹಿತಿ ಹಾಗೂ ಅದರ ಸಮರ್ಪಕ ಸದ್ಬಳಕೆಯಿಂದ ಯಶಸ್ಸಿನ ಹಾದಿಯನ್ನು ಮತ್ತಷ್ಟು ಸುಲಭಗೊಳಿಸಬಹುದು ಎಂದರು.

    300x250 AD

    ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದ ಅದಿತಿ ವೈದ್ಯ, ಸುಮಂತ ಶಾಸ್ತ್ರೀ, ಅಕ್ಷಯ ಶೇಟಿಯಾ ಇವರುಗಳ ಜೊತೆ ರಾಜ್ಯಮಟ್ಟದ ಮೊದಲ ಹತ್ತು ಸ್ಥಾನಗಳನ್ನು ಗಳಿಸಿದ ಇತರ ಒಂಭತ್ತು ವಿದ್ಯಾರ್ಥಿಗಳನ್ನೂ ಸನ್ಮಾನಿಸಿ ಪುರಸ್ಕರಿಸಲಾಯಿತು. 95% ಹಾಗೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳೂ ಪುರಸ್ಕಾರಕ್ಕೆ ಭಾಜನರಾದರು. ಪಿ.ಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದ 9ನೇ ರ‍್ಯಾಂಕ್ ವಿಜೇತೆ ರಂಜನಾ ಮಡಿವಾಳ ಹಾಗೂ ಕಾಲೇಜಿಗೆ ರ‍್ಯಾಂಕ್ ಪಡೆದ ಪ್ರಾಪ್ತಿ ನಾಯಕ, ಶ್ರೀನಂದಾ ದಿಂಡೆಗಳೊಡಗೂಡಿ ಅತ್ಯುತ್ತಮ ಅಂಕಗಳಿಸಿ ಸಾಧನೆಗೈದ ಉಳಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ಶ್ರೀಲಕ್ಷಿ ಶೆಟ್ಟಿ ಹಾಗೂ ಕಾಲೇಜಿನ ರ‍್ಯಾಂಕ್ ವಿದ್ಯಾರ್ಥಿಗಳಾದ ಮೆಹರ್ ಸೈಯದ್, ರೋಶನಿ ನಾಯ್ಕ ಇವರನ್ನು ಸನ್ಮಾನಿಸಲಾಯಿತು. ಸಾಧನೆಗೈದ ಉಳಿದ ವಿದ್ಯಾರ್ಥಿಗಳನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.

    ಹಿರಿಯ ವಿಶ್ವಸ್ಥರಾದ ಎನ್.ಬಿ.ಶಾನಭಾಗ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ಕಾರ್ಯಕ್ರಮದ ಕುರಿತು ದಿಕ್ಸೂಚಿ ಮಾತುಗಳನ್ನಾಡಿದರು. ರಮೇಶ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಶೇಷಗಿರಿ ಶಾನಭಾಗ ಹೆರವಟ್ಟಾ, ಶೈಕ್ಷಣಿಕ ಸಲಹೆಗಾರ ಆರ್.ಎಚ್.ದೇಶಭಂಡಾರಿ, ಸಂಸ್ಥೆಯ ಅಂಗಸoಸ್ಥೆಗಳ ಮುಖ್ಯಸ್ಥರಾದ ಕಿರಣ ಭಟ್ಟ, ಸುಜಾತಾ ಹೆಗಡೆ, ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ವೇದಿಕೆಯಲ್ಲಿದ್ದರು. ಅನಂತ ಶಾನಭಾಗ ಸ್ವಾಗತಿಸಿ ಪರಿಚಯಿಸಿದರು, ಡಿ.ಡಿ.ಕಾಮತ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರ ಪರವಾಗಿ ಶಿವಾನಂದ ಭಟ್ಟ ಅನಿಸಿಕೆ ವ್ಯಕ್ತಪಡಿಸಿದರು. ಗಣೇಶ ಜೋಶಿ, ಶಾಹಿದಾ ಶೆಟ್ಟಿ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top