• Slide
    Slide
    Slide
    previous arrow
    next arrow
  • ಜೂ.19ಕ್ಕೆ ಮಂಜುಗುಣಿ ಹಾಲು ಉತ್ಪಾದಕ ಸಂಘದಿಂದ ಚೆಕ್ ವಿತರಣೆ

    300x250 AD

    ಶಿರಸಿ: ಮಂಜುಗುಣಿ ಹಾಲು ಉತ್ಪಾದಕರ ಸಹಕಾರಿ ಸಂಘದ ಲಾಭಾಂಶದ ಮತ್ತು ಡಿವಿಡೆಂಟ್ ಹಣ ಚೆಕ್ ಮುಖಾಂತರ ವಿತರಣಾ ಕಾರ್ಯಕ್ರಮವನ್ನು ಜೂ. 19 ಸೋಮವಾರದಂದು ಮಂಜುಗುಣಿ ಹಾಲು ಉತ್ಪಾದಕ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಆಯೋಜಿಸಲಾಗಿದೆ.

    ಮಧ್ಯಾಹ್ನ 2.30 ರಿಂದ ಪಶು ವಿಜ್ಞಾನ ಕೃಷಿ ವಿಜ್ಞಾನ ಕೇಂದ್ರ ಶಿರಸಿ ವಿಜ್ಞಾನಿ ರಂಗನಾಥ ಜಿ.ಜೆ ಹೈನುಗಾರಿಕೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ನಂತರದಲ್ಲಿ ಮಂಜುಗುಣಿ ಯಾತ್ರಿ ನಿವಾಸದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಉದ್ಘಾಟಿಸಲಿದ್ದಾರೆ. ಕೆ.ಎಂ.ಎಫ್, ಧಾರವಾಡ ಮತ್ತು ಕೆ.ಡಿಸಿ.ಸಿ ಬ್ಯಾಂಕ್ ಶಿರಸಿ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಚೆಕ್ ವಿತರಿಸಲಿದ್ದು, ಶ್ರೀಕ್ಷೇತ್ರ ವೆಂಕಟ್ರಮಣ ದೇವಸ್ಥಾನ, ಮಂಜುಗುಣಿ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಘನ ಉಪಸ್ಥಿತಿ ನೀಡಲಿದ್ದಾರೆ.

    300x250 AD

    ಅಧ್ಯಕ್ಷತೆಯನ್ನು ಮಂಜುಗುಣಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ ಶಿವಲಿಂಗ ಗೌಡ‌ ಪಾಟೀಲ್‌ ತೆಪ್ಪಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಜುಗುಣಿ ಗ್ರಾ.ಪಂ. ಅಧ್ಯಕ್ಷೆ ವೀಣಾ ಚಲುವಾದಿ, ಎಂಇಎಸ್ ನಿರ್ದೇಶಕ ಎಸ್.ಕೆ.ಭಾಗ್ವತ್ ಶಿರಸಿಮಕ್ಕಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಮಂಜುಗುಣಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಕಲ್ಲಳ್ಳಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ, ಹಾಲುಒಕ್ಕೂಟದ ಜಿಲ್ಲಾ ಮುಖ್ಯಸ್ಥ ಎಸ್.ಎಸ್.ಬಿಜೂರ್, ಪಿಡಿಒ ಶ್ರೀಮತಿ ಸೌಮ್ಯಾ ಹೆಗಡೆ ಹಾಜರಿರಲಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top