ಸಿದ್ದಾಪುರ: ತಾಲೂಕಿನ ವಾಜಗೋಡ ಗ್ರಾಮ ಪಂಚಾಯತದ ಮಸ್ತಿಲಹಕ್ಲುನಲ್ಲಿ ಜೂನ್ 18ರ ಬೆಳಿಗ್ಗೆ 12 ಗಂಟೆಗೆ ವನಮಹೋತ್ಸವ ಹಾಗೂ ಕ್ಷೇತ್ರದ ನೂತನ ಶಾಸಕ ಭೀಮಣ್ಣ ನಾಯ್ಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಸಂತ ನಾಯ್ಕ ಮನ್ಮನೆ ಭಾಗವಹಿಸಲಿದ್ದಾರೆ. ಊರ ನಾಗರೀಕರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಶಾಸಕ ಭೀಮಣ್ಣ ನಾಯ್ಕ ಅವರ ಅಭಿಮಾನಿಗಳು ಪಕ್ಷದ ನಾಯಕರು ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಯಕ್ರಮದ ಸಂಘಟಕರಾದ ವಕೀಲರಾದ ಜಿ.ಟಿ.ನಾಯ್ಕ ಮಾಣಕಿನಗುಳಿರವರು ಪ್ರಕಟಣೆಯಲ್ಲಿ ಕೋರಿದ್ದಾರೆ.