ಜೊಯಿಡಾ: ಜಲಜೀವನ್ ಮಿಷನ್ ಯೋಜನೆಯ ಆಶ್ರಯದಡಿ ಹಮ್ಮಿಕೊಳ್ಳಲಾಗಿದ್ದ ನೀರಿನ ಸಂರಕ್ಷಣೆ ಹಾಗೂ ಜಲಮೂಲಗಳ ರಕ್ಷಣೆ ಕುರಿತು ಜನಜಾಗೃತಿಯನ್ನು ಮೂಡಿಸುವ ಜಾಗೃತಿ ಜಾಥಾ ವಾಹನಕ್ಕೆ ಶುಕ್ರವಾರ ಶಾಸಕ ಆರ್.ವಿ.ದೇಶಪಾಂಡೆ ಜೊಯಿಡಾ ತಾಲೂಕು ಕೇಂದ್ರದಲ್ಲಿರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇಶಪಾಂಡೆ, ನೀರಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ನೀರನ್ನು ಹಿತ ಮಿತವಾಗಿ ಬಳಸಿಕೊಳ್ಳಬೇಕು. ಜಲಮೂಲಗಳ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು. ಈ ನಿಟ್ಟಿನಲ್ಲಿ ಕೆರೆಗಳ ಹೂಳೆತ್ತುವಿಕೆ ಕಾರ್ಯಕ್ಕೆ ನಮ್ಮ ಶ್ರೀವಿ.ಆರ್.ಡಿ.ಎಂ ಟ್ರಸ್ಟ್ ವಿಶೇಷ ಆದ್ಯತೆಯಡಿ ಕೆಲಸ ನಿರ್ವಹಿಸುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಗಳಾದ ಸಂಜೀವ್ ಭಜಂತ್ರಿ, ಸುರೇಶ್ ಒಕ್ಕುಂದ, ಜಲಜೀವನ್ ಮಿಷನ್ ಅಧಿಕಾರಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಶೇಖ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ದೇಸಾಯಿ, ಕೆಪಿಸಿಸಿ ಸದಸ್ಯರಾದ ಸದಾನಂದ ದಬಗಾರ, ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ್, ಮಾಜಿ ಜಿ.ಪಂ ಸದಸ್ಯರುಗಳಾದ ರಮೇಶ್ ನಾಯ್ಕ, ಸಂಜಯ್ ಹಣಬರ್, ಕಾಂಗ್ರೆಸ್ ಮುಖಂಡರುಗಳಾದ ಆರೀಶ್ ಖಾದರ್, ತುಷಾರ್ ಸುಂಟನಕರ್, ಅರುಣ್ ಭಗವತಿರಾಜ್, ದೇವಿದಾಸ್ ದೇಸಾಯಿ ಮೊದಲಾದರು ಇದ್ದರು.