• Slide
    Slide
    Slide
    previous arrow
    next arrow
  • ಮೊದಲ ಬಾರಿಗೆ 1.34 ಲಕ್ಷ ಕೋಟಿ ರೂ ವಹಿವಾಟು ನಡೆಸಿದ ಖಾದಿ ಉತ್ಪನ್ನಗಳು

    300x250 AD

    ನವದೆಹಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC)ದ ಉತ್ಪನ್ನಗಳು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ 1.34 ಲಕ್ಷ ಕೋಟಿ ರೂಪಾಯಿ ವಹಿವಾಟು ಗಡಿ ದಾಟಿದೆ ಎಂದು MSME ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

    ಎಂಎಸ್‌ಎಂಇ ಸಚಿವಾಲಯದ ಅಡಿಯಲ್ಲಿನ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಖಾದಿ ಉತ್ಪನ್ನಗಳ ವಿನ್ಯಾಸ, ಉತ್ಪಾದನೆ ಮತ್ತು ವಿತರಣೆಯಲ್ಲಿ ‘ಸ್ವಾವಲಂಬಿ’ಯಾಗುವ ಮೂಲಕ ದೃಢವಾದ ಭಾರತದ ಚಿತ್ರಣವನ್ನು ಪ್ರಸ್ತುತಪಡಿಸಿದೆ ಎಂದು ಬಣ್ಣಿಸಲಾಗಿದೆ.

    ಇದಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಕುಶಲಕರ್ಮಿಗಳು ತಯಾರಿಸಿದ ಸ್ವದೇಶಿ ಖಾದಿ ಉತ್ಪನ್ನಗಳ ಮಾರಾಟವು ಕಳೆದ ಒಂಬತ್ತು ಹಣಕಾಸು ವರ್ಷಗಳಲ್ಲಿ 332 %ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ. 2013-14ನೇ ಹಣಕಾಸು ವರ್ಷದಲ್ಲಿ ರೂ 31,154 ಕೋಟಿ ವಹಿವಾಟಿನಿಂದ 2022-23ನೇ ಹಣಕಾಸು ವರ್ಷದಲ್ಲಿ ರೂ 1,34,630 ಕೋಟಿಗಳ ವಹಿವಾಟು ತಲುಪಿದೆ, ಈ ಮೂಲಕ ಭಾರತ ನಿರ್ಮಿತ ಖಾದಿ ಉತ್ಪನ್ನಗಳ ಮಾರಾಟವು ಹೊಸ ಎತ್ತರಕ್ಕೆ ಏರಿದೆ.

    300x250 AD

    ಭಾರತದಲ್ಲಿ ಖಾದಿ ಉತ್ಪನ್ನಗಳ ದಾಖಲೆಯ ಮಾರಾಟದ ಬಳಿಕ ಕೆವಿಐಸಿ ಗ್ರಾಮೀಣ ಪ್ರದೇಶಗಳಲ್ಲಿ 9,54,899 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಚಿವಾಲಯ ಹೇಳಿದೆ.

    ಕೆವಿಐಸಿ ಅಧ್ಯಕ್ಷ ಮನೋಜ್ ಕುಮಾರ್ ಈ ಸಾಧನೆಯನ್ನು ಮಹಾತ್ಮ ಗಾಂಧಿಯವರ ಪ್ರೇರಣೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಮಾರ್ಗದರ್ಶನ ಮತ್ತು ದೇಶದ ಹಳ್ಳಿಗಳಲ್ಲಿ ಕೆಲಸ ಮಾಡುವ ಕುಶಲಕರ್ಮಿಗಳ ಶ್ರಮಕ್ಕೆ ದೊರೆತ ಮನ್ನಣೆ ಎಂದು ಬಣ್ಣಿಸಿದ್ದಾರೆ. “ಪ್ರಧಾನಿ ಮೋದಿ ಅವರು ದೇಶ ಮತ್ತು ವಿದೇಶಗಳಲ್ಲಿ ಪ್ರತಿ ವೇದಿಕೆಯಲ್ಲಿ ಖಾದಿಯನ್ನು ಪ್ರಚಾರ ಮಾಡಿದ್ದಾರೆ, ಇದರಿಂದಾಗಿ ಖಾದಿ ಜನಪ್ರಿಯತೆಯ ಹೊಸ ಉತ್ತುಂಗವನ್ನು ತಲುಪಿದೆ” ಎಂದಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top