• Slide
    Slide
    Slide
    previous arrow
    next arrow
  • ರಕ್ತದಾನದಿಂದ ಆರೋಗ್ಯಕ್ಕೂ ಒಳ್ಳೆಯದಾಗಲಿದೆ: ಡಾ.ಪಿಕಳೆ

    300x250 AD

    ಕಾರವಾರ: ನಗರದ ರೋಟರಿ ಪಶ್ಚಿಮ ಘಟಕದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನ ಆಚರಣೆ ಮಾಡಲಾಯಿತು.
    ನಗರದ ಪಿಕಳೆ ನರ್ಸಿಂಗ್ ಹೋಂ ನಲ್ಲಿ ರಕ್ತದಾನ ಶಿಬಿರ ನಡೆಸುವ ಮೂಲಕ ವಿಶ್ವ ರಕ್ತದಾನ ದಿನಾಚರಣೆಯನ್ನ ಆಚರಣೆ ಮಾಡಲಾಯಿತು.

    ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ಡಾ. ನಿತೀನ್ ಪಿಕಳೆ ಚಾಲನೆಯನ್ನು ನೀಡಿ, ಮಾತನಾಡಿದ ಅವರು ರಕ್ತದಾನ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು. ನಿರಂತರ ರಕ್ತದಾನ ಮಾಡುವುದರಿಂದ ಹಲವು ಕಾಯಿಲೆಗಳನ್ನ ತಡೆಯಬಹುದು, ರಕ್ತದಾನ ಮಾಡುವುದಕ್ಕೆ ಭಯ ಪಡುವ ಅಗತ್ಯವಿಲ್ಲ ಎಂದರು.

    300x250 AD

    ಡಿವೈಎಸ್‌ಪಿ ವ್ಯಾಲೆಂಟೈನ್ ಡಿಸೋಜಾ ಮಾತನಾಡಿ, ರಕ್ತದಾನ ಮಾಡಲು ಜನರು ಮುಂದೆ ಬರಬೇಕು. ರಕ್ತದಾನ ಮಾಡುವುದಕ್ಕೆ ಭಯ ಪಡುವ ಅಗತ್ಯವಿಲ್ಲ. ಒಂದು ಜೀವ ಉಳಿಸಲು ರಕ್ತದಾನ ಸಹಕಾರಿಯಾಗುವುದರ ಜೊತೆಗೆ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀಳಲಿದೆ ಎಂದರು.
    ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಉದಯ್ ಶೆಟ್ಟಿ, ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಲಕರ್, ರೋಟರಿ ಪಶ್ಚಿಮ ಘಟಕದ ರಾಜು ಪಾಟೀಲ್, ಅಧ್ಯಕ್ಷರಾದ ಪ್ರಕಾಶ್ ರೇವಣಕರ್, ಪ್ರೀತಮ್ ವೆರ್ಣೇಕರ್, ಆನಂದ್ ಥಾಮ್ಸೆ, ಲಕ್ಷ್ಮಿಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಗರ ಸಂಚಾರಿ ಠಾಣೆ ಪಿ.ಎಸ್.ಐ ನಾಗಪ್ಪ, ಸಂದೀಪ್ ಸಾಗರ್ ಸೇರಿದಂತೆ ಸುಮಾರು 46 ಜನರು ರಕ್ತದಾನವನ್ನ ಮಾಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top