ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಢಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳು ಕೆಸಿಇಟಿ-2023 ರ ಅಗ್ರಿಕಲ್ಚರ್ ಹಾಗೂ ಇಂಜಿನಿಯರಿಂಗ್ ವಿಭಾಗದ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ರ‍್ಯಾಂಕ್ ಗಳಿಸುವುದರ ಮೂಲಕ ಅಮೋಘ ಸಾಧನೆ ಮಾಡಿ ಸಂಸ್ಥೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ.
ಕೆಸಿಇಟಿ-2023 ರ ಅಗ್ರಿಕಲ್ಚರ್ ವಿಭಾಗದ ಪ್ರವೇಶ ಪರೀಕ್ಷೆಯಲ್ಲಿ 421ನೇ ರ‍್ಯಾಂಕ್ ಗಳಿಸಿ ಕು. ಶ್ರೀಜನಿ ಭಟ್ ಉತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಕು. ಶ್ರೀನಂದಾ ದಿಂಡೆ 553ನೇ ರ‍್ಯಾಂಕ್, ಕು. ಪ್ರಾಪ್ತಿ ನಾಯಕ್ 684ನೇ ರ‍್ಯಾಂಕ್, ಕು. ಸಾತ್ವಿಕ್ ಭಟ್ಟ 855ನೇ ರ‍್ಯಾಂಕ್ ಗಳಿಸಿದ್ದಾರೆ.
ಕೆಸಿಇಟಿ-2023 ರ ಇಂಜಿನಿಯರಿಂಗ್ ವಿಭಾಗದ ಪ್ರವೇಶ ಪರೀಕ್ಷೆಯಲ್ಲಿ 1126ನೇ ರ‍್ಯಾಂಕ್ ಗಳಿಸಿ ಕು. ಶ್ರೀಜನಿ ಭಟ್ ಅತ್ಯುತ್ತಮ ಸಾಧನೆಗೈದಿದ್ದಾಳೆ. ಕು. ಪ್ರಾಪ್ತಿ ನಾಯಕ್ 1206ನೇ ರ‍್ಯಾಂಕ್, ಕು. ಸಾತ್ವಿಕ್ ಭಟ್ಟ 1286ನೇ ರ‍್ಯಾಂಕ್, ಕು. ಶ್ರೀನಂದಾ ದಿಂಡೆ 1404ನೇ ರ‍್ಯಾಂಕ್, ಕು. ಸಾಯಿಕಿರಣ ಶೇಟ್ 1856ನೇ ರ‍್ಯಾಂಕ್, ಕು. ರಂಜಿತಾ ನಾಯಕ್ 1859ನೇ ರ‍್ಯಾಂಕ್ ಗಳಿಸುವುದರ ಮೂಲಕ ಅತ್ಯುತ್ತಮ ಸಾಧನೆಗೈದಿರುತ್ತಾರೆ. ಐದು ಸಾವಿರದೊಳಗೆ 8 ವಿದ್ಯಾರ್ಥಿಗಳು, ಹತ್ತು ಸಾವಿರದೊಳಗೆ 12 ವಿದ್ಯಾರ್ಥಿಗಳು, ಇಪ್ಪತ್ತೈದು ಸಾವಿರದೊಳಗೆ 20 ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿಯನ್ನು ತಂದು ಕೊಟ್ಟಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ ಟ್ರಸ್ಟ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಕಿರಣ ಭಟ್ ಉಪಪ್ರಾಂಶುಪಾಲರಾದ ಸುಜಾತಾ ಹೆಗಡೆ, ಉಪನ್ಯಾಸಕ ವರ್ಗದವರು ಹಾಗೂ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭವನ್ನು ಹಾರೈಸಿದ್ದಾರೆ.