Slide
Slide
Slide
previous arrow
next arrow

ಬಹುಬೇಡಿಕೆಯ ‘ಹೊಂಡಾ ಶೈನ್ 100’ ಬಿಡುಗಡೆ: ಶುಭ ಹಾರೈಸಿದ ಶಾಸಕ ಭೀಮಣ್ಣ

300x250 AD

ಶಿರಸಿ: ನಗರದ ತೋಟಗಾರ ಕಲ್ಯಾಣ ಮಂಟಪದ ಸಭಾಭವನದಲ್ಲಿ ಹೊಂಡಾ ಶೈನ್ 100 ಬೈಕ್ ನ್ನು ಶಾಸಕ ಭೀಮಣ್ಣ ನಾಯ್ಕ ಬುಧವಾರ ವಿದ್ಯುಕ್ತವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಆದಿಶಕ್ತಿ ಹೊಂಡಾ ಶೊರೂಮ್ ದ್ವಿಚಕ್ರ ವಾಹನಗಳ ಮಾರಾಟ ಮಾಡುವುದರ ಜತೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಶ್ರೀಕಾಂತ ಹೆಗಡೆ ಆಟೋ ಮೊಬೈಲ್ ಉದ್ಯಮದಲ್ಲಿ ಬಹಳಷ್ಟು ಅನುಭವ ಹೊಂದಿದ್ದಾರೆ. ಅವರ ಉದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಬೈಕ್ ಚಲಾಯಿಸುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸಿ, ಸುರಕ್ಷತಾ ವಸ್ತುಗಳನ್ನು ಕಡ್ಡಾಯವಾಗಿ ಧರಿಸಬೇಕು. ಅಲ್ಲದೇ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.

ಟಿ.ಎಸ್.ಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಶ ಹೆಗಡೆ ಮಾತನಾಡಿ, ಹೊಂಡಾ ಕಂಪೆನಿಯು ಶೈನ್ 100 ಬೈಕ್ ಮಾರುಕಟ್ಟೆಗೆ ಪರಿಚಯಿಸಿ, ಜನರಿಗೆ ಅನುಕೂಲ ಕಲ್ಪಿಸಿದೆ. ಹೊಂಡಾ ಕಂಪೆನಿಯು ಒಳ್ಳೆಯ ಉತ್ಪನ್ನಗಳನ್ನು ನೀಡುವಲ್ಲಿ ಹೆಸರುಗಳಿಸಿದ ಸಂಸ್ಥೆಯಾಗಿದೆ. ಅವರಿಂದ ಉತ್ತಮ ಗುಣಮಟ್ಟದ ಬೈಕ್ ಗಳು ಬಿಡುಗಡೆಯಾಗಲಿ ಎಂದರು.
ಜಿ.ಪಂ ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಮಾತನಾಡಿ, ಶ್ರೀಕಾಂತ ಹೆಗಡೆ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಗಳಿಸಿದ ವ್ಯಕ್ತಿಯಾಗಿದ್ದಾರೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ಹೊಂಡಾ ಶೈನ್ 100 ಪರಿಚಯಿಸಿದೆ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು.
ಯುವ ಮುಖಂಡ ದೀಪಕ ಹೆಗಡೆ ದೊಡ್ಡೂರು ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ಅನೇಕ ಯಂತ್ರಗಳನ್ನು ಪರಿಚಯಿಸಿದೆ. ಹೊಂಡಾ ಎಂದರೆ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡುತ್ತದೆ. ಕಡಿಮೆ ದರದಲ್ಲಿ ಅತ್ಯಧಿಕ ಮೈಲೆಜ್ ನೀಡುವ ಹೊಂಡಾ ಶೈನ್ 100 ಜನರಿಗೆ ಉಪಯೋಗವಾಗಲಿ ಎಂದರು.

300x250 AD

ಆದಿಶಕ್ತಿ ಹೊಂಡಾ ಮಾಲೀಕ ಶ್ರೀಕಾಂತ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಹೊಂಡಾ ಸಂಸ್ಥೆಯು ಆಟೋ ಮೊಬೈಲ್ ಕ್ಷೇತ್ರವಲ್ಲದೇ, ಪ್ರತಿ ಕ್ಷೇತ್ರದಲ್ಲಿಯೂ ಚಿರಪರಿಚತವಾಗಿದೆ. ತಮ್ಮೆಲ್ಲರ ಸಹಕಾರದಿಂದ ಆದಿಶಕ್ತಿ ಹೊಂಡಾ ಜನರ ಮನಸ್ಸನ್ನು ಗೆದ್ದಿದೆ. ಹೊಂಡಾ ಶೈನ್ 100 ಬೇಡಿಕೆ ಬಹಳಷ್ಟಿದೆ. ಉತ್ತರ ಕರ್ನಾಟಕ ಭಾಗದ ಶಿರಸಿಯಲ್ಲಿ ಮೊಟ್ಟ ಮೊದಲ ಬಾರಿಗೆ ಹೊಂಡಾ ಶೈನ್ 100 ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿದರು.
ಆದಿಶಕ್ತಿ ಜನರಲ್ ಮ್ಯಾನೆಜರ್ ಆನಂದ ಕಾಮತ್, ಹೊಂಡಾ ಶೈನ್ 100 ಕುರಿತು ಮಾಹಿತಿ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ, ಎಚ್.ಎಂ.ಎಸ್.ಐನ ಗೌತಮ ಧನಪಾಲ, ವೀರೇಂದ್ರ ಪಾಟೀಲ್, ರಜತ ದವಳೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ನಾಲ್ವರು ಗ್ರಾಹಕರಿಗೆ ಹೊಂಡಾ ಶೈನ್ 100 ಬೈಕ್ ನ ಕೀ ಸಾಂಕೇತಿಕವಾಗಿ ವಿತರಿಸಲಾಯಿತು.

Share This
300x250 AD
300x250 AD
300x250 AD
Back to top