Slide
Slide
Slide
previous arrow
next arrow

ಅರಣ್ಯ ಅತಿಕ್ರಮಣದಾರ ವಿಚಾರಣೆ: ಅಡ್ವೊಕೇಟ್ ಜನರಲ್ ಜೊತೆ ರವೀಂದ್ರ ನಾಯ್ಕ ಚರ್ಚೆ

300x250 AD

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾಗಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂದು ಎಂಟು ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಗೆ ಸಂಬಂಧಿಸಿ  ರಾಜ್ಯ ಸರಕಾರ ನಿಲುವು ಹಾಗೂ ಅರಣ್ಯವಾಸಿಗಳ ಕಾನೂನು ಅಂಶಗಳ ಕುರಿತು ನೂತನವಾಗಿ ರಾಜ್ಯ ಸರಕಾರದಿಂದ ನೇಮಕವಾಗಿರುವ ಕೆ.ಶಶಿಕಿರಣ್ ಶೆಟ್ಟಿ ಅಡ್ವೊಕೇಟ್ ಜನರಲ್ ಅವರೊಂದಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಚರ್ಚಿಸಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಕರ್ನಾಟಕ ಸರಕಾರದ ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿರುವ ಆರ್.ವಿ ದೇಶಪಾಂಡೆ ಮಾರ್ಗದರ್ಶನ ಮತ್ತು ಸೂಚನೆ ಮೇರೆಗೆ ಸುಪ್ರೀಂ ಕೋರ್ಟಿನಲ್ಲಿ ರಾಜ್ಯ ಸರಕಾರವು ಅರಣ್ಯವಾಸಿಗಳ ಪರವಾಗಿ ಪೂರಕವಾದ ಅಂಶಗಳ ಕುರಿತು ಚರ್ಚಿಸಲು ಅವರನ್ನು ರವೀಂದ್ರ ನಾಯ್ಕ ಭೆಟ್ಟಿಯಾದರು.

ಸುಪ್ರೀಂ ಕೋರ್ಟಿನಲ್ಲಿ ವೈಲ್ಡ ಲೈಫ್ ಫಸ್ಟ್ ಹಾಗೂ ಇನ್ನಿತರ ಏಳು ಪರಿಸರವಾದಿ ಸಂಸ್ಥೆಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿ, ಅತಿಕ್ರಮಣದಾರರ ಕ್ಷೇತ್ರದಲ್ಲಿ ಅರಣ್ಯೀಕರಣ ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಈಗಾಗಲೇ ರಾಜ್ಯ ಸರಕಾರ ಮಂಜೂರಿ ಅರ್ಜಿ ತಿರಸ್ಕಾರವಾಗಿರುವ ಅತಿಕ್ರಮಣದಾರರನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸುವುದಾಗಿ ಸುಪ್ರೀಂ ಕೋರ್ಟಿನಲ್ಲಿ ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅಂತಿಮ ವಿಚಾರಣೆ ಪೂರ್ವದಲ್ಲಿ ಅರಣ್ಯವಾಸಿಗಳ ಪರವಾಗಿ ಮಹತ್ವವಾದ ಕಾನೂನು ಅಂಶಗಳ ಕುರಿತು ರವೀಂದ್ರ ನಾಯ್ಕ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿದರು.

300x250 AD

ಕೇಂದ್ರ ಸರಕಾರದ ನಿಲುವು:
 ಸುಪ್ರೀಂ ಕೋರ್ಟಿನಲ್ಲಿ ಅರಣ್ಯವಾಸಿಗಳ ಪರವಾಗಿ ಕೇಂದ್ರ ಸರಕಾರವು ಸ್ಪಷ್ಟ ನಿಲುವನ್ನು  ಪ್ರಕಟಿಸುವುದು ಹಾಗೂ ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಪ್ರಮಾಣ ಪತ್ರ ಸಲ್ಲಿಸುವುದು ಅವಶ್ಯವೆಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top