ಭಟ್ಕಳ: ಮೀನುಗಾರಿಕೆ ಹಾಗೂ ಬಂದರು ಇಲಾಖೆ ಮತ್ತು ಒಳನಾಡು ಜಲಸಾರಿಗೆ ಸಚಿವರ ಕಚೇರಿಯನ್ನು ರಾಜ್ಯದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಸಚಿವ ಮಂಕಾಳ ವೈದ್ಯ ದಂಪತಿಗೆ ಹರಸಿದರು.
ಬೆಂಗಳೂರಿನ ವಿಧಾನಸೌಧದ 2ನೇ ಮಹಡಿಯಲ್ಲಿ 257 ಮತ್ತು 258 ಸಂಖ್ಯೆಯ ಕೊಠಡಿಯಲ್ಲಿ ಮೀನುಗಾರಿಕೆ ಹಾಗೂ ಬಂದರು ಇಲಾಖೆ ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಚೇರಿಯನ್ನು ತೆರಯಲಾಗಿದೆ. ಕಚೇರಿ ಉದ್ಘಾಟನೆ ಹಿನ್ನಲೆಯಲ್ಲಿ ಸಚಿವ ಮಂಕಾಳ ವೈದ್ಯ ಪತ್ನಿ ಪುಷ್ಪಲತಾ ವೈದ್ಯ ಪುತ್ರಿಯರಾದ ಬೀನಾ ಮತ್ತು ಸೋನಾ ಕಚೇರಿಯಲ್ಲಿ ನಡೆದ ಗಣಪತಿ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಭಟ್ಕಳದಿಂದ ಕಾಂಗ್ರೆಸ್ ಪಕ್ಷದ ಎರಡು ವಿಭಾಗದ ಬ್ಲಾಕ್ ಅಧ್ಯಕ್ಷರು, ನೂರಾರು ಸಂಖ್ಯೆಯ ಕಾರ್ಯಕರ್ತರು, ಅಬಿಮಾನಿಗಳು, ಹಿತೈಷಿಗಳು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ ಮೀನುಗಾರಿಕೆ ಇಲಾಖೆಗೆ ಅಭಿವೃದ್ಧಿ ಪಥದಲ್ಲಿ ಹೊಸ ಭಾಷ್ಯ ಬರೆಯಲಾಗುವದು. ಕರಾವಳಿ ಪ್ರದೇಶದಲ್ಲಿ ಬಂದರು ಅಭಿವೃದ್ಧಿ, ಒಳನಾಡು ಜಲಾಸಾರಿಗೆ ಮೀನುಗಾರಿಕೆಗೆ ಸಾಕಣೆ ಪ್ರೋತ್ಸಾಹ, ಮೀನು ಪಂಜರ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗುವದು. ಸಿದ್ದರಾಮಯ್ಯ ಸರ್ಕಾರ 5 ಭಾಗ್ಯಗಗಳನ್ನು ನೀಡಿದೆ. ಇನ್ನು ಇತರ ಯೋಜನೆಗಳಿಗೆ ಹಣ ಮಂಜೂರಿ ಮಾಡುವುದಿಲ್ಲ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಭಾಗ್ಯಗಳನ್ನು ಹೊಂದಿಸಲು ಮುಖ್ಯಮಂತ್ರಿಗಳು ಈಗಾಗಲೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಇಲಾಖೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವ ಕುರಿತು ತನಗೆ ಭರವಸೆ ನೀಡಿದ್ದಾರೆ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಭಟ್ಕಳದಿಂದ ಬ್ಲಾಕ ಅಧ್ಯಕ್ಷ ವೆಂಕಟೇಶ ನಾಯ್ಕ, ಮೀನುಗಾರಿಕೆ ಮುಖಂಡ ವಸಂತ ಖಾರ್ವಿ, ರತ್ನಾಕರ ಖಾರ್ವಿ, ಜನತಾ ಕೋ-ಆಫ್ ಸೊಸೈಟಿಯ ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ, ಡಿ.ಎಲ್. ನಾಯ್ಕ, ಗಣೇಶ ಕಿಣಿ, ಗೋಪಾಲ ನಾಯ್ಕ, ಭಾಸ್ಕರ ನಾಯ್ಕ ಸೇರಿದಂತೆ ಇತರರು ಇದ್ದರು.