Slide
Slide
Slide
previous arrow
next arrow

ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

300x250 AD

ಸಿದ್ದಾಪುರ: 2016ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ.

ತಾಲೂಕಿನ ಕಾನಸೂರು ಸಮೀಪದ ಹೀರೆಕೈನಲ್ಲಿ ಆ.11, 2016 ರಲ್ಲಿ ಅಪ್ರಾಪ್ತ ಬಾಲಕ ಶರತ್ ಆಚಾರಿ ಎಂಬಾತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಕೊಲೆಗೈದ ಈರ್ವರು ಆರೋಪಿಗಳ ಪೈಕಿ ಎರಡನೇ ಆರೋಪಿ ದಿಲ್ರಾಜ್ ಎಂಬಾತನಿಗೆ ಜಿಲ್ಲಾ ನ್ಯಾಯಾಲಯದ ಶಿರಸಿ ಪೀಠದ ನ್ಯಾಯಾಧೀಶ ಕಿರಣ್ ಕಿಣಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಮೊದಲನೇ ಆರೋಪಿ ಇದುವರೆಗೂ ಪತ್ತೆಯಾಗಿಲ್ಲ.

300x250 AD

ಆರೋಪಿಗಳ ವಿರುದ್ಧ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗೀಕರ್ ವಾದ ಮಂಡಿಸಿದ್ದರು ಎಂದು ತಿಳಿದುಬಂದಿದೆ.

Share This
300x250 AD
300x250 AD
300x250 AD
Back to top