ಜೊಯಿಡಾ: ರಾಮನಗರದ 108 ವಾಹನದ ಸಿಬ್ಬಂದಿಗಳು ವಾಹನದಲ್ಲೇ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಸೂಸುತ್ರ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೆರಿಗೆಗೆ ಎಂದು ರಾಮನಗರ ಸರ್ಕಾರಿ ಆಸ್ಪತ್ರೆಗೆ ಬಂದ ಮಹಿಳೆಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸದೇ ಅಲ್ಲಿನ ಹೆರಿಗೆ ವಿಭಾಗದವರು ಬೆಳಗಾವಿಗೆ ಹೋಗಲು ಹೇಳಿದ್ದಾರೆ, ಆಗ ಅಲ್ಲಿನ ಅಂಬ್ಯುಲೆನ್ಸ ಸಿಬ್ಬಂದಿಗಳು ಮಹಿಳೆಯನ್ನು ಬೆಳಗಾವಿಗೆ ಒಯ್ಯುವ ಮಾರ್ಗದಲ್ಲಿ ಹೆರಿಗೆ ನೋವು ಹೆಚ್ಚಾದ ಕಾರಣ ಅಂಬ್ಯುಲೆನ್ಸ ವಾಹನದಲ್ಲೇ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನಲ್ಲಿ ಸುಸಜ್ಜಿತ ವ್ಯವಸ್ಥೆಯ ಆಸ್ಪತ್ರೆಗಳಿದ್ದರು ಯಾರು ಜವಾಬ್ದಾರಿ ತೆಗೆದುಕೊಳ್ಳದೆ ಇರುವುದು ವರ್ಷಗಳಿಂದ ನಡೆದು ಬಂದಿದೆ. ದಾಂಡೇಲಿ ,ಕಾರವಾರ, ಬೆಳಗಾವಿಗೆ ಕಳುಹಿಸಿ ಕೈ ತೊಳೆದು ಕೊಳ್ಳುತ್ತಿದ್ದಾರೆ. ಹಿಂದೆ ತಾಲೂಕಿನಲ್ಲಿ ಆಸ್ಪತ್ರೆಗಳು ಇಲ್ಲದ ಸಮಯದಲ್ಲೂ ಸ್ಥಳೀಯ ಸೂಲಗಿತ್ತಿ ಮಹಿಳೆಯರು ಸೂಸುತ್ರ ಹೆರಿಗೆ ಮಾಡಿಸುತ್ತಿದ್ದರು. ಜೋಯಿಡಾ ,ರಾಮನಗರ ಭಾಗದ ಅಂಬ್ಯುಲೆನ್ಸ ಸಿಬ್ಬಂದಿಗಳು ಹಲವಾರು ಬಾರಿ ವಾಹನದಲ್ಲೇ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.