• Slide
    Slide
    Slide
    previous arrow
    next arrow
  • ಆಂಬುಲೆನ್ಸ್ ಚಾಲಕ, ಫಾರ್ಮಸಿ ಅಧಿಕಾರಿಗೆ ಸನ್ಮಾನ

    300x250 AD

    ದಾಂಡೇಲಿ: ಕಳೆದ 20 ವರ್ಷಗಳಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಾರ್ಮಸಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಪದೋನ್ನತಿಗೊಂಡು ವರ್ಗಾವಣೆಯಾಗಿರುವ ಯೋಗೇಂದ್ರ ಪಡುಕೋಣೆ ಮತ್ತು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರೋಗಿಯನ್ನು ಶರವೇಗದಲ್ಲಿ ಧಾರವಾಡದ ಆಸ್ಪತ್ರೆಗೆ ಕೊಂಡೊಯ್ದು ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಸೋಮನಗೌಡ.ಸಿ.ಎಂ ಅವರಿಗೆ ದಾಂಡೇಲಿ ನಗರದ ಸ್ಥಳೀಯ ಸುದರ್ಶನ ನಗರದ ಗೆಳೆಯರ ಬಳಗದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

    ಇಬ್ಬರನ್ನು ಸನ್ಮಾನಿಸಿ ಮಾತನಾಡಿದ ಗೆಳೆಯರ ಬಳಗದ ಸಂಚಾಲಕರಾದ ಗೋಪಾಲ್ ಸಿಂಗ್ ರಜಪೂತ್, ಯೋಗೇಂದ್ರ ಪಡುಕೋಣೆಯವರ ನಗುಮೊಗದ ಸೇವೆ ಮತ್ತು ಸೋಮನಗೌಡ ಅವರ ತಡವರಿಯದ ಸ್ಪಂದನೆಯನ್ನು ಯಾವತ್ತು ಮರೆಯುವ ಹಾಗಿಲ್ಲ. ಇವರಿಬ್ಬರಂತೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು, ದಾದಿಯರು, ಸಿಬ್ಬಂದಿಗಳು ಸಹ ಉತ್ತಮ ಸೇವೆಯನ್ನು ನೀಡುವುದರ ಮೂಲಕ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಇವರ ಈ ಸೇವೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

    ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಯೋಗೇಂದ್ರ ಪಡುಕೋಣೆಯವರು ದಾಂಡೇಲಿ ನನಗೆ ಬದುಕನ್ನು ನೀಡಿದೆ. ದಾಂಡೇಲಿ ಎಲ್ಲವನ್ನು ಕೊಟ್ಟಿದೆ. ದಾಂಡೇಲಿಗರ ಪ್ರೀತಿ, ವಾತ್ಸಲ್ಯವೆ ನಮ್ಮ ಪ್ರಾಮಾಣಿಕ ಸೇವೆಗೆ ಸ್ಪೂರ್ತಿಯಾಗಿದೆ ಎಂದರು.
    ಸೋಮನಗೌಡ.ಸಿ.ಎ0 ಅವರು ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ, ಮೇಲಾಧಿಕಾರಿಗಳ ಆದೇಶದಂತೆ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ಒಂದು ಜೀವವನ್ನು ಉಳಿಸುವ ಸಂದರ್ಭದಲ್ಲಿ ಶಕ್ತಿಮೀರಿ ಪ್ರಯತ್ನಿಸಬೇಕಾಗಿರುವುದು ಮನುಷ್ಯರಾದವರ ಕರ್ತವ್ಯ. ಆ ಕರ್ತವ್ಯವನ್ನು ಎಲ್ಲರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ಮಾಡಿದ್ದೇವೆ ಎಂಬ ನಂಬಿಕೆ ನಮಗಿದೆ ಎಂದರು.
    ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಅವರು ಮಾತನಾಡಿ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡುವುದರ ಜೊತೆಯಲ್ಲಿ ಜನಸ್ನೇಹಿಯಾಗಿ ತಮ್ಮ ನಡವಳಿಕೆಗಳ ಮೂಲಕ ಜನರ ಪ್ರೀತಿ ಗಳಿಸುವುದರಿಂದ ಕೆಲಸ ಮಾಡುವ ಸಂಸ್ಥೆಗೂ ಹೆಸರು ಬರುತ್ತದೆ. ಅಂತಹ ಕರ‍್ಯವನ್ನು ಯೋಗೇಂದ್ರ ಪಡುಕೋಣೆ ಮತ್ತು ಸೋಮನಗೌಡ.ಸಿ.ಎಂ ಅವರು ಮಾಡಿದ್ದಾರೆ. ಅದೇ ರೀತಿ ನಮ್ಮ ಆಸ್ಪತ್ರೆಯ ಎಲ್ಲ ವೈದ್ಯರು, ದಾದಿಯರು, ಸಿಬ್ಬಂದಿಗಳು ಸಹ ಉತ್ತಮವಾಗಿ ಸೇವೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವುದು ಅಭಿನಂದನೀಯ ಎಂದರು.

    300x250 AD

    ಈ ಸಂದರ್ಭದಲ್ಲಿ ನರ್ಸ್ ಅಧೀಕ್ಷಕಿ ತುಳಾಸ, ಗೆಳೆಯರ ಬಳಗದ ಗೌರವ ಸಂಚಾಲಕರು ಹಾಗೂ ಕೊಡುಗೈ ದಾನಿ ಮಾರುತಿ ಕ್ಷತ್ರಿಯ, ಗೆಳೆಯರ ಬಳಗದ ಪ್ರಮುಖರುಗಳಾದ ಮಲ್ಲಿಕಾರ್ಜುನ್ ಕೊರಗಲ್, ಮಾಂತೇಶ್, ಮಂಜುನಾಥ್ ರಾಮಸ್ವಾಮಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top