ಹೊನ್ನಾವರ: ತಾಲೂಕಿನ ಕರ್ಕಿ ಗ್ರಾ.ಪಂ.ಆವರಣದಲ್ಲಿ ಬೆಳಕು ವಾಟ್ಸಪ್ ಗ್ರೂಪ ಎಡ್ಮೀನ್ ರವಿ ಮುಕ್ರಿ ಮುಂದಾಳತ್ವದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ಪ್ರತಿವರ್ಷವು ಹತ್ತಾರು ಗಿಡಗಳನ್ನು ನೆಡುವ ಜೊತೆ ತಿಂಗಳಿನಾದ್ಯ0ತ ವಿವಿಧ ಅಧಿಕಾರಿಗಳಿಗೆ ಮತ್ತು ಸಂಘಟನೆಯ ಪ್ರಮುಖರಿಗೆ ಗಿಡಗಳನ್ನು ನೀಡುವ ಮೂಲಕ ಪರಿಸರ ಉಳುವಿಗಾಗಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ಪ್ಲೋರಾ, ಸದಸ್ಯ ಶ್ರೀಕಾಂತ ಮೊಗೇರ, ಪಿ.ಡಿ.ಓ ಕಿರಣಕುಮಾರ್ ಇವರಿಗೆ ಸಾಂಕೇತಿಕವಾಗಿ ರವಿ ಮುಕ್ರಿ ಇವರು ಜಂಬೆ ಹಣ್ಣಿನ ಗಿಡವನ್ನು ವಿತರಿಸಿದರು.