ಶಿರಸಿ: ಕೃಷಿ ವಿ.ವಿ. ದಾರವಾಡ ಹಾಗೂ ಅರಣ್ಯ ಮಹಾವಿದ್ಯಾಲಯ, ಶಿರಸಿ ಇವರ ಸಹಯೋಗದಲ್ಲಿ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ (DAESI) ವಿದ್ಯಾರ್ಥಿಗಳಿಗೆ ಒಂದು ದಿನದ ಕೃಷಿ ಬೇಟಿಯನ್ನು ಹಮ್ಮಿಕೊಳ್ಳಲಾಯಿತು. ಯೋಜನಾ ಅನುಷ್ಠಾನಕರಾದ ಪ್ರೊ. ಇನಾಮತಿ ಅವರು ದೇಸಿ ಡಿಪ್ಲೊಮಾ ಕೋರ್ಸಿನ ಪ್ರಾಮುಖ್ಯತೆ ತಿಳಿಸಿ ಪ್ರವಾಸಕ್ಕೆ ಚಾಲನೆ ನೀಡಿದರು.
ಪ್ರಗತಿಪರ ಯುವ ಕೃಷಿ ಉದ್ಯಮಿಗಳಾದ ಶ್ರೀಮತಿ ಸೀಮಾ ಹಾಗೂ ಸುಜಯ ಭಟ್ ಹೊಸಳ್ಳಿರವರ ಸಮಗ್ರ ಕೃಷಿ, ಶ್ರೀಧರ ಭಟ್ ಹೊಸಮನೆ ರವರ ಅಡಿಕೆ-ಕಾಳುಮೆಣಸು ತೋಟ ಹಾಗೂ ಮಧುಕೇಶ್ವರ ಭಟ್ ಕಲ್ಲಳ್ಳಿರವರ ಜೇನು ಕೃಷಿಯನ್ನು ಕ್ಷೇತ್ರಕ್ಕೆ ಭೇಟಿ ನೀಡಿ ಅವರ ಕೃಷಿ ಅನುಭವ ಪಡೆಯಲಾಯಿತು.
ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ಮಾರ್ಗದರ್ಶನ ನೀಡಿದರು, ಸುವೀರ ಹೆಗಡೆರವರು ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ದೇಸಿ ಕೋರ್ಸಿನ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.