ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಪೂರ್ವ-ಪ್ರಾಥಮಿಕ ಶಾಲೆಯ ನವೀಕೃತಗೊಂಡ ಕಟ್ಟಡವನ್ನು ನಗರದ ಕೆ.ಎಚ್.ಬಿ. ಕಾಲೋನಿಯಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಗಳಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಉದ್ಘಾಟಿಸಿದರು.
ಇದೇ ಸಮಯದಲ್ಲಿ ಶಾಲೆಯ ಪ್ರಾರಂಭೋತ್ಸವವನ್ನು ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸದೊಂದಿಗೆ ವಿಧಿವತ್ತಾಗಿ ನೆರವೇರಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ನಗರಸಭಾಧ್ಯಕ್ಷ ಗಣಪತಿ ನಾಯ್ಕ ಹಾಗೂ ನಗರಸಭಾ ಸದಸ್ಯ ಶ್ರೀಕಾಂತ ಬಳ್ಳಾರಿ, ಹೌಸಿಂಗ್ ಬೋರ್ಡ್ ಅಧಿಕಾರಿಗಳಾದ ಲಕ್ಷ್ಮಿನಾರಾಯಣ ಹೆಗಡೆ ಮತ್ತು ಯೋಗಾಚಾರ್ಯರಾದ ಶಂಕರನಾರಾಯಣ ಶಾಸ್ತ್ರೀ ಉಪಸ್ಥಿತರಿದ್ದರು. ಅಲ್ಲದೇ ಸ್ವರ್ಣವಲ್ಲಿ ಮಹಾಸಂಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಿ. ಎನ್. ಹೆಗಡೆ ಬೊಮ್ಮನಳ್ಳಿ, ರಾಜರಾಜೇಶ್ವರಿ ಸಂಸ್ಥೆಯ ಕಾರ್ಯದರ್ಶಿ ಶಿವರಾಮ್ ಭಟ್, ಶಾಲೆಯ ಅಧ್ಯಕ್ಷರಾದ ಮೇಜರ್ ರಘುನಂದನ ಹೆಗಡೆ, ಕಾರ್ಯದರ್ಶಿಗಳಾದ ಕೆ. ಎನ್. ಹೊಸಮನಿ ಹಾಗೂ ಇತರ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಕಾರ್ಯದರ್ಶಿಯಾದ ಕೆ. ಎನ್. ಹೊಸಮನಿ, ವಂದನಾರ್ಪಣೆಯನ್ನು ಪ್ರಾಚಾರ್ಯರಾದ ವಸಂತ ಭಟ್ ಹಾಗೂ ನಿರೂಪಣೆಯನ್ನು ಶ್ರೀಮತಿ ಜಯಶ್ರೀ ಭಟ್ ನೆರವೇರಿಸಿದರು.