Slide
Slide
Slide
previous arrow
next arrow

ಅದ್ಧೂರಿಯಾಗಿ ಚಾಲನೆಗೊಂಡ ಅಂಕೋಲಾ ಸಿರಿ ಉತ್ಸವ

300x250 AD

ಅಂಕೋಲಾ: ಶ್ರೀಮಂಜುನಾಥ ಟಿವಿ ಕುಮಟಾರವರ ವತಿಯಿಂದ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ ಅಂಕೋಲಾ ಸಹಯೋಗದೊಂದಿಗೆ ಪಟ್ಟಣದ ಜೈಹಿಂದ್ ಮೈದಾನದಲ್ಲಿ ಅಂಕೋಲಾ ಸಿರಿ ಉತ್ಸವಕ್ಕೆ ಚಾಲನೆ ದೊರೆಯಿತು.

ಈ ಉತ್ಸವವನ್ನು ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಕೆ.ಗಾಂವಕರ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಸ್ವಾಭಿಮಾನದ ಪ್ರತೀಕ ಅಂಕೋಲಾ ಸಿರಿ ಉತ್ಸವ ಜಿಲ್ಲೆಯಲ್ಲಿಯೇ ವೈಭವದ ಉತ್ಸವ. ಸಮಾಜದಲ್ಲಿ ಹಿಂದುಳಿದಿರುವ ವ್ಯಕ್ತಿಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಅಂಕೋಲಾದ ಈ ವೇದಿಕೆಯಿಂದ ಆಗುತ್ತಿದೆ ಎಂದು ಹೇಳಿದರು.

300x250 AD

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕ ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ ಅಡ್ಲೂರು ಮಾತನಾಡಿ ಕಲೆ ಸಂಸ್ಕೃತಿಗಳ ಅನಾವರಣ ಈ ವೇದಿಕೆಯಲ್ಲಿ ಆಗುತ್ತಿದೆ. ಈ ಸಂಘಟನೆಯವರು ಸಮಾಜಮುಖಿ ಕಾರ್ಯಗಳನ್ನು ಮಾಡಿವರನ್ನು ಈ ವೇದಿಕೆಯಲ್ಲಿ ಸನ್ಮಾನಿಸುತ್ತಿರುವುದು ಜನ ಮೆಚ್ಚಿದ ಕಾರ್ಯ. ಉತ್ಸವಗಳು ನಮ್ಮ ಹಿಂದಿನ ಜನಾಂಗದ ಬದುಕಿನ ಚಿತ್ರಣಗಳನ್ನು ಮತ್ತು ಇಲ್ಲಿಯ ಹೋರಾಟದ ಮಹನೀಯರ ಬದುಕನ್ನು ನಾಡಿಗೆ ತಿಳಿಸುವಂತಾಗಬೇಕು. ಮುಂದಿನ ದಿನಗಳಲ್ಲಿ ಉತ್ಸವಗಳು ಎಲ್ಲರನ್ನು ಸೇರಿಸುವ ಕೊಂಡಿ ಆಗಲಿ ಎಂದರು.
ಈ ಸಂದರ್ಭದಲ್ಲಿ ನಾಟಿ ವೈದ್ಯರಾದ ಹನುಮಂತ ಗೌಡ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ 9ನೇ ರ‍್ಯಾಂಕ್ ಬಂದ ವಿದ್ಯಾರ್ಥಿನಿ ದೃಶ್ಯ ಉದ್ದಂಡ ನಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಗೌರವಾಧ್ಯಕ್ಷ ರಾಘು ಕಾಕರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಪುರಸಭಾ ಸದಸ್ಯ ಮಂಜುನಾಥ ನಾಯ್ಕ, ಹೊನ್ನಾವರ ಜನಪರ ವೇದಿಕೆಯ ಜಿ.ಎನ್.ಗೌಡ ಕೋಡಾಣಿ, ವಿಶ್ವವಿದ್ಯಾಲಯ ಪ್ರಾಧ್ಯಾಫಕ ಎಸ್.ಕೆ. ಮೇಲಕಾರ್, ಮಂಜುನಾಥ ಟಿವಿ ಸಂಪಾದಕ ರವಿ ಗಾವಡಿ ಹಾಗೂ ಇತರ ವೃಂದದವರು ಉಪಸ್ಥಿತರಿದ್ದರು.
ಶ್ರೀಮಂಜುನಾಥ ಟಿವಿಯ ಅಧ್ಯಕ್ಷ ಲಕ್ಷ್ಮಣ ಪಟಗಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪುನೀತ ನಾಯ್ಕ ಯಕ್ಷನೃತ್ಯ ಮಾಡಿದರು ಮೇಘನಾ ಪ್ರಾರ್ಥನೆ ಹಾಡಿದರು. ರಾಜೇಶ ನಾಯಕ ನಿರೂಪಿಸಿದರು. ನೀಲಕಂಠ ಬಲೇಗಾರ ವಂದಿಸಿದರು.

Share This
300x250 AD
300x250 AD
300x250 AD
Back to top