• Slide
    Slide
    Slide
    previous arrow
    next arrow
  • ಪ್ಲಾಸ್ಟಿಕ್‌ಗಳ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವುದು ಅನಿವಾರ್ಯ: ಡಿಸಿ

    300x250 AD

    ಕಾರವಾರ: ಇಂದಿನ ದಿನಗಳಲ್ಲಿ ಪರಿಸರ ಸ್ವಚ್ಚತೆ ಕಾಪಾಡುವುದು ಪ್ಲಾಸ್ಟಿಕ್ ಹಾಗೂ ಕೊಳೆಯದೆ ಇರುವ ವಸ್ತುಗಳ ಅತಿಯಾದ ಬಳಕೆಯ ಬಗ್ಗೆ ಜನರಲ್ಲಿ ತಿಳುವಳಿಕೆ ಮಾಡಿಸುವುದು ಅತೀ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

    ನಗರದ ರವೀಂದ್ರನಾಥ ಕಡಲತೀರದಲ್ಲಿ ವಿಶ್ವ ಸಾಗರ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಚತೆ ಹಾಗೂ ಪ್ಲಾಸ್ಟಿಕ್ ಕುರಿತ ಬಳಕೆಯಲ್ಲಿ ಕೇವಲ ಸರಕಾರದ ಕೆಲಸವಾಗದೆ ಎಲ್ಲ ಜನಸಾಮಾನ್ಯರು ಕ್ರೀಯಾತ್ಮಕವಾಗಿ ಪಾಲ್ಗೊಂಡಾಗ ಮಾತ್ರ ಇಂಥಹ ಕಾರ್ಯಕ್ರಮ ಯಶಸ್ವಿಯಾಗುತ್ತವೆ. ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್‌ಗಳುನ್ನು ತಡೆಯಲು ಕೇಂದ್ರ ಸರಕಾರವು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ತರಲಿದೆ ಎಂದರು.

    ಬಳಿಕ ಡಾ.ರಾಠೋಡ ಮತ್ತು ಜಯೇಶ ಎ.ಸಿ.ಎಸ್‌ಇವರು ಕಾರ್ಯಕ್ರಮದ ಮಹತ್ವದ ಬಗೆ ಮತ್ತು ಸಾಗರ ಮಾಲಿನ್ಯದ ಇಂದಿನ ಸ್ಥಿತಿಗತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ್ದರು.
    ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡು ಸುಮಾರು 1 ಕಿ.ಮಿ ಕ್ರಮಿಸಿ 566 ಕೆ.ಜಿ ವಿವಿಧ ರೀತಿಯ ತ್ಯಾಜ್ಯವನ್ನು ಸಂಗ್ರಹಿಸಿದರು. 140 ಕೆ.ಜಿ ಯಷ್ಟು ಗಾಜಿನ ಮಧ್ಯದ ಬಾಟಲಿಗಳು, 70 ಕೆ.ಜಿ ಡೈಪರ್, 83 ಕೆ.ಜಿ ಇತರೆ ವಿವಿಧ ಪ್ಲಾಸ್ಟಿಕ ವಸ್ತುಗಳು, 28 ಕೆ.ಜಿ ಚಪ್ಪಲಿ ಮತ್ತು ಶ್ಯೂಗಳು, ಆಹಾರ ಪೊಟ್ಟಗಳು, 5 ಕೆ.ಜಿ ಗಾಜಿನ ಬಾಟಲಿಗಳು, 4 ಕೆ.ಜಿ ಪ್ಲಾಸ್ಟಿಕ್ ಕಪ್, 5 ಕೆ.ಜಿ ಥರ್ಮೊಕೊಲ ಇತ್ಯಾದಿ ತ್ಯಾಜ ವಸ್ತುಗಳು ಕೂಡಿದ್ದವು.

    300x250 AD

    ಈ ಕಾರ್ಯಕ್ರಮದಲ್ಲಿ, ಕ.ವಿ.ವಿ ಸ್ನಾತಕೋತ್ತರ ಕೇಂದ್ರ ಆಡಳಿತಾಧಿಕಾರಿ ಶಾಹಿನ ಶೇಖ್, ಡಾ. ಜಗನ್ನಾಥ ಎಲ್.ರಾಠೋಡ, ಡಾ. ಶಿವಕುಮಾರ ಹರಗಿ, ಪ್ರಮೋದ ನಾಯಕ ಅರಣ್ಯ, ಅನು ನಾಯರ ಡಾ.ಗುಲ್ನಾಪ್ ಡಾ. ಪ್ರಜ್ಞಾ ಬಾಂದೇಕರ, ಡಾ. ಶ್ರೀದೇವಿ ಹಕ್ಕಿಮನಿ, ಕುಮಾರಿ ಸುಜಲ ರೇವಣಕರ, ಸೂರಜ ಪೂಜಾರ, ಶಾನವಾಜ ಕಡಪ, ಶ್ರೀ ರಾಮು ರಾಠೋಡ ಹಾಗೂ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top